ಬೆಳಗಾವಿ- ಘಟಪ್ರಭಾ ಪಟ್ಟಣದಲ್ಲಿ ಟ್ರಾಫಿಕ್ ಜಾಸ್ತಿ ಅಂತಾ, ಬೈಪಾಸ್ ರಸ್ತೆಯ ಮೂಲಕ ಬನಹಟ್ಟಿಗೆ ಹೊರಟಿದ್ದ ಅರಿಷಿಣ ವ್ಯಾಪಾರಿಗಳ ಟಾಟಾ ನೆಕ್ಸಾನ್ ಕಾರು ಘಟಪ್ರಭಾ ಕಾಲುವೆಗೆ ಬಿದ್ದು ಈಜಲು ಬರುತ್ತಿದ್ದು ಒಬ್ಬ ದಡ ಸೇರಿ ನೀರಿನಲ್ಲಿ ಮುಳುಗುತ್ತಿದ್ದ ಇನ್ನೊಬ್ಬನನ್ನು ಯುವಕನೊಬ್ಬ ರಕ್ಷಿಸಿದ ಘಟನೆ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಬಳಿಯ ಘಟಪ್ರಭಾ ಎಡದಂಡೆ ಕಾಲುವೆ ಬಳಿ ನಡೆದಿದೆ.
ದುರದುಂಡಿ- ಮಲ್ಲಾಪೂರ್ ಬೈಪಾಸ್ ರಸ್ತೆಯ ಪಕ್ಕದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ಇದ್ದು ಈ ಕಾಲುವೆಗೆ ನಿನ್ನೆ ಸಂಜೆ ಚಾಲಕನ ನಿಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದಿದೆ, ಈ ಕಾರಿನಲ್ಲಿದ್ದ ಅರಿಷಿಣ ವ್ಯಾಪಾರಿಗಳಾದ ಬನಹಟ್ಟಿ ರಾಮಪುರಿಯ ವ್ಯಾಪಾರಿಗಳಾದ ಖಲೀಲ್ ರಾಜಣ್ಣವರ ,ಮತ್ತು ಮಲ್ಲೀಕ್ ಮುಲ್ಲಾ ಇಬ್ಬರೂ ಪಾರಾಗಿದ್ದಾರೆ.
ಕಾರು ಕಾಲುವೆಗೆ ಉರುಳಿದ ತಕ್ಷಣ ಬಾಗಿಲು ತೆರೆದು ಇಬ್ಬರೂ ಹೊರ ಬಂದಿದ್ದಾರೆ.ಮಲ್ಲಿಕ ಮುಲ್ಲಾ ಈಜಿ ದಡ ಸೇರಿದ್ದಾರೆ.ಈಜಲು ಬಾರದ ಖಲೀಲ್ ರಾಜಣ್ಣವರ ಕಾಲುವೆಯಲ್ಲಿ ಕೊಚ್ವಿ ಹೋಗುತ್ತಿರುವದನ್ನು ಗಮನಿಸಿದ ಚೇತನ್ ವಿಠ್ಢಲ ಒಡೆಯರ್ ಜೀವದ ಹಂಗು ತೊರೆದು ಕಾಲುವೆಗೆ ಜಿಗಿದು,ಖಲೀಲ್ ನನ್ನು ರಕ್ಷಿಸಿದ್ದಾನೆ.
ಚೇತನ ಒಡೆಯರ್ ಎಂಬ ಯುವಕನ ಧೈರ್ಯಕ್ಕೆ ಅಪಾರ ಮೆಚ್ವುಗೆ ವ್ಯಕ್ತವಾಗಿದೆ.ಅರಿಷಿಣ ವ್ಯಾಪಾರಕ್ಕಾಗಿ ಬನಹಟ್ಟಿಯಿಂದ ಘಟಪ್ರಭಾ ಪಟ್ಟಣಕ್ಕೆ ಬಂದಿದ್ದ ಇಬ್ಬರು ವ್ಯಾಪಾರಿಗಳು ಸುರಕ್ಷಿತವಾಗಿದ್ದಾರೆ.