Breaking News

ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಖೋ..ಖೋ ಆಟ..!!

ಬೆಳಗಾವಿ-ಬೆಳಗಾವಿ ಡಿಡಿಪಿಐ ಹುದ್ದೆಗೆ ಇಬ್ಬರು ಅಧಿಕಾರ ನಡುವೆ ತೀವ್ರ ಗುದ್ದಾಟ ನಡೆದಿದೆ.ಖೋ ಖೋ ಆಟದ ಮಾದರಿಯಲ್ಲೇ ಇಬ್ಬರ ನಡುವೆ ತಿಕ್ಕಾಟ ನಡೆದಿದ್ದು ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಯ ಚಟುವಟಿಕೆಗಳು ತಲ್ಲಣಗೊಂಡಿವೆ.

ಒಂದೇ ತಿಂಗಳಲ್ಲಿ ಹಲವು ಸಲ ಇಬ್ಬರು ಅಧಿಕಾರ ವರ್ಗಾವಣೆ ಆಗಿದೆ. ಎ. ಬಿ ಪುಂಡಲೀಕ ಹಾಗೂ ಬಸವರಾಜ ನಾಲತವಾಡ ನಡುವೆ ತೀವ್ರ ಪೈಪೋಟಿ ನಡೆದಿದೆ.ಬೆಳಗಾವಿ ಡಿಡಿಪಿಐ ಆಗಿದ್ದ ನಲತವಾಡ ಅವರನ್ನು ಡಿಸ್ಟರ್ಬ್ ಮಾಡಿ,ಪುಂಡಲೀಕ ಅವರು ಸರ್ಕಾರದಿಂದ ಆದೇಶ ಹೊರಡಿಸಿ ಬೆಳಗಾವಿ ಡಿಡಿಪಿಐ ಆಗಿ ಚಾರ್ಜ್ ತೆಗೆದುಕೊಂಡ ಎರಡು ದಿನದಲ್ಲೇ ನಲತವಾಡ ಅವರು ಬೆಂಗಳೂರಿಗೆ ಹೋಗಿ,ಪುಂಡಲೀಕ್ ಅವರಿಗೆ ಡಿಸ್ಟರ್ಬ್ ಮಾಡಿ ಎರಡೇ ದಿನದಲ್ಲಿ ಪುಂಡಲೀಕ್ ಅವರ ಜಾಗ ಖಾಲಿ ಮಾಡಿಸಿ ಬೆಳಗಾವಿ ಡಿಡಿಪಿಐ ಆಗಿ ಚಾರ್ಜ್ ತೆಗೆದುಕೊಂಡಿದ್ದರು.

ಇದಕ್ಕೆ ಸುಮ್ಮನಾಗದ ಪುಂಡಲೀಕ ಅವರು ಮತ್ತೆ ಬೆಂಗಳೂರಿಗೆ ಹೋಗಿ ಎರಡು ದಿನದ ಹಿಂದಷ್ಟೆ ನಲತವಾಡ ಅವರಿಗೆ ಖೋ ಎಂದು ಸೋಮವಾರ ನಲತವಾಡ ಅವರ ಜಾಗ ಖಾಲಿ ಮಾಡಿಸಿ ಈಗ ಮತ್ತೆ ಪುಂಡಲೀಕ್ ಅವರೇ ಡಿಡಿಪಿಐ ಖುರ್ಚಿ ಕಬ್ಜಾ ಮಾಡಿಕೊಂಡಿದ್ದಾರೆ.ಎರಡು ದಿಗಳಿಂದ ಪುಂಡಲೀಕ್ ಅವರೇ ಈಗ ಬೆಳಗಾವಿ ಡಿಡಿಪಿಐ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

ಎರಡು ಬಾರಿ ಪುಂಡಲೀಕ್ ಅವರಿಂದ ಖೋ ಖೋ ಆಜ್ಞೆ ಸ್ವೀಕರಿಸಿ ಬೆಂಗಳೂರಿಗೆ ಗೋ.ಗೋ ಮಾಡಿರುವ ನಲತವಾಡ ಅವರು ಮತ್ತೆ ಬೆಂಗಳೂರಿಗೆ ಹೋಗಿ ಪುಂಡಲೀಕ್ ಅವರಿಗೆ ಖೋ ಕೊಡ್ತಾರೋ ಅಥವಾ ಪುಂಡಲೀಕ್ ಅವರೇ ಮುಂದುವರೆಯುತ್ತಾರೋ ಎನ್ನುವದನ್ನು ಕಾಯ್ದು ನೋಡಬೇಕಾಗಿದೆ.

ಖೋ..ಖೋ ಮಾದರಿಯಲ್ಲಿ ಇಬ್ಬರ ನಡುವೆ ನಡೆದಿರುವ ಗುದ್ದಾಟ,ಮತ್ತು ತಿಕ್ಕಾಟ ಅಪಹಾಸ್ಯಕ್ಕೆ ಕಾರಣವಾಗಿದೆ.

Check Also

ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ

ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …

Leave a Reply

Your email address will not be published. Required fields are marked *