ಬೆಳಗಾವಿ-ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸದಸ್ಯರು ದುರ್ಮರಣವಾದ ದೊಡ್ಡ ದುರಂರ ಬೆಳಗಾವಿಯ ಶಾಹುನಗರದ ಮೊದಲನೇ ಕ್ರಾಸ್‌ನಲ್ಲಿ ಸಂಭವಿಸಿದೆ.
ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ಕುಟುಂಬಸ್ಥರು,ನಿರ್ಮಾಣ ಹಂತದ ಕಟ್ಟದ ಬೋರವೆಲ್ ನ ಕರೆಂಟ್ ಶಾಕ್ ಹೊಡೆದು ಒಂದೇ ಕುಟುಂಬದ ಮೂರು ಸಾವನ್ನೊಪ್ಪಿದ್ದಾರೆ.ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳಾಗಿದ್ದಾರೆ.
ಈರಪ್ಪ ಗಂಗಪ್ಪ ರಾಥೋಡ(55) ಶಾಂತವ್ವ ಈರಪ್ಪ ರಾಥೋಥ 50)ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ಮೃತ ದುರ್ದೈವಿಗಳಾಗಿದ್ದಾರೆ.
ನಿರ್ಮಾಣ ಹಂತದ ಮನೆಗೆ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದ ರಾಥೋಡ್ ದಂಪತಿಗಳು,ಮೊಮ್ಮಗಳಾದ ಅನ್ನಪೂರ್ಣರನ್ನು ಶಿಕ್ಷಣಕ್ಕಾಗಿ ತಮ್ಮ ಬಳಿ ಇಟ್ಟುಕೊಂಡಿದ್ದ ದಂಪತಿ,ಶೆಡ್‌ನಲ್ಲಿರಾತ್ರಿ ಮಲಗಿದ್ದಾಗಲೇ ವಿದ್ಯುತ್ ತಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು, ಸಂಬಂಧಿಗಳು ಶಾಕ್ ಆಗಿದ್ದಾರೆ.ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ,ಪರಿಶೀಲನೆ ನಡೆಸಿದ್ದಾರೆ.
ಹೆಬ್ಬಾಳಕರ್ ಸಾಂತ್ವನ
ಸುದ್ದಿ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ