Breaking News

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಮತ್ತೆರಡು ರೆಕ್ಕೆ…!!

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದ ವಿಮಾನ ಸೇವೆಯಲ್ಲಿ ಮತ್ತೆ ಎರಡು ನಗರಗಳಿಗೆ ವಿಮಾನ ಸೇವೆ ಶುರುವಾಗಲಿದ್ದು, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಂಬರ್‌ 1 ರಿಂದ ಪ್ರತಿದಿನ ವಿಮಾನಯಾನ ಸಂಚಾರದ ಸೇವೆಯನ್ನು ಪ್ರಾರಂಭಿಸಲು ಸಮ್ಮತಿಸಿದೆ.

ಅಕ್ಟೋಬರ್ 1 ರಿಂದ
ಬೆಳಗಾವಿ ದೆಹಲಿ ನಡುವೆ ಪ್ರತಿದಿನ ಇಂಡಿಗೋ ಏರ್ ಲೈನ್ಸ್ ಸೇವೆ.

ಅಕ್ಟೋಬರ್ 29 ರಿಂದ ಬೆಳಗಾವಿ – ಪೂನೆ ನಡುವೆ ಸ್ಟಾರ್ ಏರಲೈನ್ಸ್ ನಿಂದ ಪ್ರತಿದಿನ ಸೇವೆ.

ಅಕ್ಟೋಂಬರ್‌ 29 ರಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ಪುಣೆ-ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ.

ಅಕ್ಟೋಂಬರ್‌ 31 ರಿಂದ ಪುಣೆ-ಬೆಳಗಾವಿ ನಡುವೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ವಾರದಲ್ಲಿ 3 ದಿನ ( ಮಂಗಳವಾರ, ಗುರುವಾರ ಮತ್ತು ಶನಿವಾರ) ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ.

ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಿರುವ ಇಂಡಿಗೋ ಮತ್ತು ಸ್ಟಾರ್ ಏರ್‌ಲೈನ್ಸ್ ಸಂಸ್ಥೆಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಈರಣ್ಣಾ ಕಡಾಡಿ ಧನ್ಯವಾದ ಹೇಳಿದ್ದಾರೆ.

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *