Breaking News
Home / Breaking News / ಎರಡು ತಿಂಗಳ ಬಳಿಕ ಬೆಳಗಾವಿಗೆ ಹಾರಿ ಬಂದ ವಿಮಾನ….!!!

ಎರಡು ತಿಂಗಳ ಬಳಿಕ ಬೆಳಗಾವಿಗೆ ಹಾರಿ ಬಂದ ವಿಮಾನ….!!!

ಬೆಳಗಾವಿ- ಎರಡು ತಿಂಗಳ ಬಳಿಕ ಬೆಳಗಾವಿ ಏರ್‌ಪೋರ್ಟ್‌ಗೆ ಮೊದಲ ವಿಮಾನ ಇಂದು ಬೆಳಿಗ್ಗೆ ಲ್ಯಾಂಡಿಂಗ್ ಆಯ್ತು ಈ ವಿಮಾನದಲ್ಲಿ

ಬೆಂಗಳೂರಿಂದ ಬೆಳಗಾವಿಗೆ ಎಂಟು ಪ್ರಯಾಣಿಕರು ಆಗಮಿಸಿದರು.

ಬೆಳಗಾವಿ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರತಿಯೊಬ್ಬ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಯಿತು.

ಬೆಂಗಳೂರಿಂದ ಬೆಳಗಾವಿಗೆ ಆಗಮಿಸಿದವರಿಗೆ ಕ್ವಾರಂಟೈನ್ ಅಗತ್ಯ ಇಲ್ಲ, ಹೈ ರಿಸ್ಕ್ ಇರುವ ರಾಜ್ಯಗಳಿಂದ ಬಂದವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗುತ್ತದೆ. ಏಳು ದಿನಗಳ ಹೋಟೆಲ್ ಕ್ವಾರಂಟೈನ್, ಬಳಿಕ ಏಳು ದಿನಗಳ ಹೋಮ್ ಕ್ವಾರಂಟೈನ್ ಮಾಡುತ್ತೇವೆ.ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಹೇಳಿದರು.

ಇಂದು ಬೆಳಗಾವಿಗೆ ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ನಿಂದ ವಿಮಾನಗಳು ಬರಲಿವೆ, ಏರ್‌ಪೋರ್ಟ್‌‌ನಲ್ಲಿ ಆರೋಗ್ಯ ಇಲಾಖೆಯ ಎರಡು ತಂಡಗಳು ಕರ್ತವ್ಯ ನಿರ್ವಹಿಸಲಿವೆ
ಈಗಾಗಲೇ ಬೆಂಗಳೂರಿಂದ ಒಂದು ಫ್ಲೈಟ್ ಬಂದಿದ್ದು ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ, ಅನ್ಯ ರಾಜ್ಯಗಳಿಂದ ಬಂದವರಿಗೆ ಇಲ್ಲಿಯೇ ಕ್ವಾರಂಟೈನ್ ಸೀಲ್ ಹಾಕಲಾಗುತ್ತದೆ. ಹೈ ರಿಸ್ಕ್ ಇರುವ 6 ರಾಜ್ಯಗಳಿಂದ ಬಂದವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗುತ್ತದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮಧ್ಯಪ್ರದೇಶ, ತಮಿಳುನಾಡು, ದೆಹಲಿಯಿಂದ ಆಗಮಿಸುವವರಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗುತ್ತದೆ.

ಉಳಿದ ರಾಜ್ಯಗಳಿಂದ ಆಗಮಿಸುವವರಿಗೆ ಹೋಮ್ ಕ್ವಾರಂಟೈನ್ ಮಾಡುತ್ತೇವೆ.ಎಂದು ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್. ಮಾಹಿತಿ ನೀಡಿದರು.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *