ಬೆಳಗಾವಿ ಜಿಲ್ಲೆಯಲ್ಲಿ ಫಾಸ್ಟ್ ರಿಕವರಿ ಇಂದು ಮತ್ತೆ 14 ಜನ ಗುಣಮುಖ
ಬೆಳಗಾವಿ, ಮೇ 25(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ 14 ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ ತಾಲ್ಲೂಕಿನ 14 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಫಾಸ್ಟ್ ಆಗಿ ಕೊರೋನಾ ಪೇಶಂಟ್ ಗಳು ಗುಣ ಮುಖರಾಗುತ್ತಿದ್ದು ಈ ವರೆಗೆ ಜಿಲ್ಲೆಯ 122 ಜನ ಸೊಂಕಿತರ ಪೈಕಿ 93 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಒಬ್ಬರು ಮೃತರಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಕೇವಲ 28 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.
ಬಿಡುಗಡೆ ಹೊಂದಿದವರ ವಿವರ:
ಪಿ-816
ಪಿ-839
ಪಿ- 822
ಪಿ-825
ಪಿ-826
ಪಿ-827
ಪಿ-829
ಪಿ-831
ಪಿ-819
ಪಿ-837
ಪಿ-840
ಪಿ-841
ಪಿ-843
ಪಿ-845
***