ಬೆಳಗಾವಿ-ರೈಲ್ವೆ ಪ್ರಯಾಣದ ವೇಳೆ ವಿಷಾಹಾರ ಸೇವಿಸಿ 8ಜನ ಯುವಕರು ಅಸ್ವಸ್ಥರಾದ ಘಟನೆನಡೆದಿದೆ.ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಪ್ರಜ್ಞಾಹೀನರಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿದ್ದಾರೆ.
ಗೋವಾದಲ್ಲಿ ವಿಷಾಹಾರ ಸೇವಿಸಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಯುವಕರು ರೈಲಿನಲ್ಲಿ ಪ್ರಜ್ಞಾಹೀನ ಸ್ಥತಿಯಲ್ಲಿ ಇದ್ದರು.ರೈಲು ಬೆಳಗಾವಿಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ,ಎಲ್ಲ ಎಂಟೂ ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರು ಜನ ಯುವಕರು ಪ್ರಜ್ಞಾಹೀನ ಸ್ಥಿತಿಗೆ, ಇಬ್ಬರು ಯುವಕರು ತೀವ್ರ ಅಸ್ವಸ್ಥರಾಗಿದ್ದಾರೆ.ಊಟ ಅಥವಾ ಚಾಕಲೇಟ್ ನಲ್ಲಿ ವಿಷಹಾರ ಸೇವಿಸಿದ ಶಂಕೆ ವ್ಯಕ್ತವಾಗಿದೆ.ಎಲ್ಲರೂ ಉತ್ತರ ಪ್ರದೇಶದ ಜಾನ್ಸಿ ಮೂಲದವರೆಂಬ ಮಾಹಿತಿ ಸಿಲ್ಕಿದೆ.ಉದ್ಯೋಗ ಅರಿಸಿ ಉತ್ತರ ಪ್ರದೇಶದಿಂದ ಗೋವಾಕ್ಕೆ ಬಂದಿದ್ದ ಯುವಕರು, ಮರಳಿ ವಾಸ್ಕೋ- ನಿಜಾಮುದ್ದೀನ್ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದ ಸಂಧರ್ಭದಲ್ಲಿ ಈ ಯುವಕರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಶಿಪ್ಟ್ ಆಗಿದ್ದಾರೆ.
ಮಾರ್ಗಮಧ್ಯೆ ವಿಷಾಹಾರ ಸೇವಿಸಿದ್ದರಿಂದ ದುರ್ಘಟನೆ ಶಂಕೆ ವ್ಯಕ್ತವಾಗಿದೆ.ಜಿಲ್ಲಾಸ್ಪತ್ರೆಗೆ ನಗರ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದರು.
ರೈಲ್ವೆ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ರು