ಬಂಕ್ ಆವರಣದಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಭಾರೀ ಅನಾಹುತ…

ಬೆಳಗಾವಿ- ಬೆಳಗಾವಿಯ, ಪೆಟ್ರೊಲ್ ಬಂಕ್‌ ಆವರಣದಲ್ಲೇ, ಕಾರಿನ ಮುಂಭಾಗಕ್ಕೆ ಆಕಸ್ಮಿಕ ಬೆಂಕಿ ತಗಲಿ, ಭಾರೀ ಅನಾಹುತ ತಪ್ಪಿದೆ.

ಬೆಳಗಾವಿಯ ನೆಹರು ನಗರದ ಬಿ.ಬಿ ಹೊಸಮನಿ ಆ್ಯಂಡ್ ಸನ್ಸ್ ಅವರಿಗೆ ಸೇರಿದ ಪೆಟ್ರೊಲ್ ಬಂಕ್ ಆವರಣದಲ್ಲಿ,ಪೆಟ್ರೊಲ್ ಬಂಕ್‌ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.ಡಿಸೈಲ್ ಹಾಕಿಕೊಳ್ಳಲು ಬಂಕ್‌ಗೆ ಬಂದಿದ್ದ ಬಿಳಿ ಬಣ್ಣದ ಶಿಫ್ಟ್ ಕಾರಿನ,ಬೊನೆಟ್‌ನಲ್ಲಿ ಬೆಂಕಿ ಕಾಣುತ್ತಿದ್ದಂತೆ ಕೀ ಜೊತೆಗೆ ಕಾರು ಮಾಲೀಕ ಪರಾರಿಯಾದ.ತಕ್ಷಣವೇ ಜಾಗೃತರಾದ ಬಂಕ್ ಸಿಬ್ಬಂದಿ ಅಗ್ನಿನಂದಕ ಸಹಾಯದಿಂದ ಬೆಂಕಿ ನಂದಿಸುವ ಯತ್ನ ನಡೆಯಿತು.

ಪೆಟ್ರೊಲ್ ಬಂಕ್ ಸಿಬ್ಬಂದಿಯಿಂದಲೇ ಅಗ್ನಿನಂದಕದಿಂದ ಬೆಂಕಿ ನಂದಿಸಲು ಯತ್ನಿಸಲಾಯಿತು‌ಸಿಬ್ಬಂದಿಯ ಈ ಕಾರ್ಯಾಚರಣೆ ಪೆಟ್ರೊಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತಕ್ಷಣವೇ ಕಾರು ನೂಕಿ ಬಂಕ್‌ನಿಂದ ಹೊರ ತಂದ ಸ್ಥಳೀಯರು ಹಾಗೂ ಸಿಬ್ಬಂದಿಗಳು ದೊಡ್ಡ ಅನಾಹುತವನ್ನೇ ತಪ್ಪಿಸಿದ್ದಾರೆ.

ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ ಬಂಕ್ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದಾಗಿ ಅತೀ ದೊಡ್ಡ ಅನಾಹುತ ತಪ್ಪಿದಂತಾಗಿದೆ.ಬೆಳಗಾವಿಯ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *