Breaking News

ಸ್ವಾಮೀಜಿ ಸೇರಿ ರಾಜ್ಯದ ಮೂವರು ಸಚಿವರಿಗೆ ಜೀವ ಬೆದರಿಕೆ ಪತ್ರ

ಬೆಳಗಾವಿ-ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ ಸೇರಿ ಮೂವರು ಸಚಿವರಿಗೆ ಅನಾಮಿಕನೊಬ್ಬ ಜೀವ ಬೆದರಿಕೆ ಪತ್ರ ಬರೆದಿದ್ದಾನೆ.

ಸಚಿವ ಸತೀಶ ಜಾರಕಿಹೊಳಿ,ದಿನೇಶ ಗುಂಡೂರಾವ್, ಪ್ರೀಯಾಂಕ್ ಖರ್ಗೆಗೂ ಜೀವ ಬೆದರಿಕೆ ಪತ್ರ ಬರೆಯಲಾಗಿದೆ.ಹಲವು ಪ್ರಗತಿಪರರು ವಿಚಾರವಾದಿಗಳಿಗೂ ಜೀವ ಬೆದರಿಕೆ ಹಾಕಲಾಗಿದೆ.ಸಪ್ಟಂಬರ್ 20 ರಂದು ಬೈಲೂರು ನಿಷ್ಕಲ ಮಂಟಪಕ್ಕೆ ಬಂದಿರುವ ಬೆದರಿಕೆ ಪತ್ರ ಈ ಪತ್ರ ದಲ್ಲಿ ಹಲವಾರು ಪ್ರಗತಿಪರ ವಿಚಾರವಾದಿಗಳ ಹೆಸರು ಪ್ರಸ್ತಾಪಿಸಲಾಗಿದೆ.ಕಳೆದ ತಿಂಗಳಷ್ಟೆ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು.ಈಗ ಮತ್ತೆ ನಿಷ್ಕಲಮಂಟಪಕ್ಕೆ ಜೀವಬೆದರಿಕೆ ಪತ್ರ ಬಂದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ,ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ‌ ಮಾಡುತ್ತಿಲ್ಲ.ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೆ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ.ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ,ನಿನ್ನ ಜೀವನದ‌ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ.ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ.ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.ಎಂದು ಶ್ರೀಗಳಿಗೆ ಬರೆದಿರುವ ಪತ್ರದಲ್ಲಿ,ಹಲವು ವಿಚಾರವಾದಿಗಳು ಹಾಗೂ ಪ್ರಗತಿಪರರ ಹೆಸರು ಪತ್ರದಲ್ಲಿ ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.

ರಾಜ್ಯದ ಮೂವರು ಸಚಿವರು ಸಾಹಿತಿಗಳ ಹೆಸರು ಬೆದರಿಕೆ ಪತ್ರದಲ್ಲಿ ಉಲ್ಲೇಖವಾಗಿದೆ.ಎಸ್ ಜಿ ಸಿದ್ದರಾಮಯ್ಯ, ಕೆ ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ,ಭಾಸ್ಕರ್ ಪ್ರಸಾದ್, ಪ್ರೋ,ಭಗವಾನ್, ಪ್ರೋ,ಮಹೇಶ್ ಚಂದ್ರ, ಬಿಟಿ ಲಲಿತಾನಾಯಕ್ ನಟ ಚೇತನ್, ನಟ ಪ್ರಕಾಶರಾಜ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ ದಿನೇಶಗುಂಡೂರಾವ್, ಧ್ವಾರಕಾನಾಥ, ದೇವನೂರು ಮಹದೇಪ್ಪ ಬಿ ಎಲ್ ವೇಣು, ಅವರ ಹೆಸರು ಉಲ್ಲೇಖಿಸಿ
ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಅನಾಮಧೇಯ ಪತ್ರದಲ್ಲಿ ಧಮಕಿ ಕೊಟ್ಟಿದ್ದಾರೆ.

ಮತಾಂಧ ಮುಸ್ಲಿಂಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡ್ತೊರೋದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದಿಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡ್ತಿರೋದು ತಪ್ಪು ‌ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ದೈರ್ಯವಿದ್ದರೆ ಹೇಳಿ ಇಲ್ಲವಾದರೆ ನಿಮ್ಮ ಕೊನೆಯ ‌ದಿನಗಳನ್ನು ಎಣಿಸಿ ಎಂದು ಅನಾಮಿಕ ಬೆದರಿಸಿದ್ದಾನೆ.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *