Breaking News

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ಕೂಗಿಗೆ ಜಗದ್ಗುರುಗಳ ಸಮರ್ಥನೆ…

ಬೆಳಗಾವಿ- ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಶಾಮನೂರು ಆರೋಪದ ವಿಚಾರವನ್ಬು ಶ್ರೀಶೈಲ ಪೀಠದ ಜಗದ್ಗುರುಗಳು ಬೆಳಗಾವಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಶ್ರೀಶೈಲಪೀಠದ ಡಾ. ಚನ್ನಸಿದ್ದರಾಮ ಪಂಡಿರಾತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾದ್ಯಮಗಳ ಜೊತೆ ಮಾತನಾಡಿದ್ರು.ಶಾಮನೂರು ಶಿವಶಂಕರಪ್ಪನರು ಹೇಳಿರುವ ಹೇಳಿಕೆ ಸತ್ಯಕ್ಕೆ ದೂರವಾಗಿಲ್ಲ.ಯಾವ ಮಟ್ಟದಲ್ಲಿ ನಮ್ಮ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನಗಳು ಸಿಗಬೇಕಿತ್ತು ಆ ಮಟ್ಟದಲ್ಲಿ ಸಿಗ್ತಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ, ಸರ್ಕಾರ ಇದನ್ನೆಲ್ಲ ತಿಳದುಕೊಳ್ಳಬೇಕು,ವೀರಶೈವ ಲಿಂಗಯತ ಅಧಿಕಾರಿಗಳಿಗೆ ಸ್ಥಾನಮಾನ ಗೌರವ ನೀಡಬೇಕು.ಲಿಂಗಾಯತ ಧರ್ಮದ ಎಲ್ಲ ಒಳಪಂಗಡಳನ್ನ ಒಬಿಸಿ ಪಟ್ಟಿಗೆ ಸೇರಿಸಬೇಕು.ನಾವೂ ಸಹ ಇವತ್ತು ಎರಡು ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಾಡಲಿದ್ದೇವೆ.ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿಗೆ ಸೇರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು,ಶೀಘ್ರದಲ್ಲಿಯೇ ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೆವೆ ಎಂದ ಶ್ರೀಶೈಲ ಜಗದ್ಗುರುಗಳು ಹೇಳಿದ್ರು.

ಶಕ್ತಿ ಪ್ರದರ್ಶನ….

ಬೆಳಗಾವಿಯಲ್ಲಿ ಕುರುಬ ಸಮಾಜದ ನಂತರ ವೀರಶೈವ ಲಿಂಗಾಯತರ ಶಕ್ತಿ ಪ್ರದರ್ಶನ ನಡೆದಿರುವದು ವಿಶೇಷ.ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಣೆ ಮಾಡಲಾಯಿತು‌ವೀರಭದ್ರೇಶ್ವರ ಜಯಂತ್ಯುತ್ಸವ ನೆಪದಲ್ಲಿ ಬೆಳಗಾವಿಯಲ್ಲಿ ವೀರಶೈವ ಸಮಾಜದ ಶಕ್ತಿಪ್ರದರ್ಶನ ನಡೆಯಿತು‌. ಲಿಂಗಾಯತ ಒಳಪಂಗಡಗಳಿಗೆ OBC ಮೀಸಲಾತಿಗೆ ಹಕ್ಕೊತ್ತಾಯ ಮಾಡಲಾಯಿತು.ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಲಾಯಿತು.ಬೆಳಗಾವಿ ಗಾಂಧಿ ಭವನದಲ್ಲಿ ನಡೆಯುತ್ತಿರುವ ‌ಸಮಾರಂಭಕ್ಕೆ ಮೊದಲು,ಚೆನ್ನಮ್ಮ ಪುತ್ಥಳಿಗೆ ಶ್ರೀಶೈಲ ಶ್ರೀ ಡಾ.ಚೆನ್ನಸಿದ್ದರಾಮ ಪಂಡಿರಾಧ್ಯ ಜಗದ್ಗುರು, ದಿಂಗಾಲೇಶ್ವರ ಶ್ರೀಗಳಿಂದ ಮಾಲಾಪರ್ಣೆ ಮಾಡಿದ್ರುಮೆರವಣಿಗೆ ಮೂಲಕ ಚೆನ್ನಮ್ಮ ವೃತ್ತದಿಂದ‌ ಗಾಂಧಿ ಭವನಕ್ಕೆ ಶ್ರೀಶೈಲ ಜಗದ್ಗುರು ಆಗಮಿಸಿದರು.

Check Also

ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!

ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ …

Leave a Reply

Your email address will not be published. Required fields are marked *