Breaking News
Home / Breaking News / ಬೆಳಗಾವಿಯಲ್ಲಿ ವೆದರ್ ರಾಡಾರ್ ಅಳವಡಿಸಿಲು ಕೇಂದ್ರಕ್ಕೆ ಲೆಟರ್..

ಬೆಳಗಾವಿಯಲ್ಲಿ ವೆದರ್ ರಾಡಾರ್ ಅಳವಡಿಸಿಲು ಕೇಂದ್ರಕ್ಕೆ ಲೆಟರ್..

ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕಾಗಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ನೀಡಿ ಒತ್ತಾಯಿಸಿದರು.

ನಮ್ಮ ರಾಜ್ಯದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿ, ನಮ್ಮದೇ ಆದ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ ಮಾಡುವುದು ಅವಶ್ಯಕತೆ ಇದ್ದು, ಕರ್ನಾಟಕದಲ್ಲಿ ಒಂದು ಡಾಪ್ಲರ್ ವೆದರ್ ರಾಡಾರ್ ಕೇಂದ್ರಗಳಿಲ್ಲ. ಹೀಗಾಗಿ ತಜ್ಞರ ಶಿಫಾರಸ್ಸಿನ ಆಧಾರದ ಮೇಲೆ ಬೆಳಗಾವಿ, ಕುಂದಾಪುರ, ರಾಯಚೂರು ಹಾಗೂ ಬೆಂಗಳೂರನಲ್ಲಿ ಈ ನಾಲ್ಕು ಆಯಕಟ್ಟಿನ ಸ್ಥಳಗಳನ್ನು ಪರಿಗಣಿಸಲು ಯೋಗ್ಯವಾಗಿದ್ದು ಕಾರಣ ಬೆಳಗಾವಿ ಮೂರು ರಾಜ್ಯಗಳ ಗಡಿ ಪ್ರದೇಶದಲ್ಲಿ ಇರುವ ಕಾರಣ ಅತಿ ಹೆಚ್ಚು ಸೂಕ್ತವಾದ ಸ್ಥಾನ ಬೆಳಗಾವಿ ಆಗಿದೇ ಎಂದು ಒತ್ತಾಯಿಸಿದರು.

ಜಾಗತಿಕ ಹವಾಮಾನ ಪರಿಸ್ಥಿತಿಗಳಿಂದಾಗಿ ಬದಲಾಗುತ್ತಿರುವ ಹವಾಮಾನ ವ್ಯವಸ್ಥೆಗಳೊಂದಿಗೆ, ಹವಾಮಾನವನ್ನು ನಿಖರತೆಗೆ ಮುನ್ಸೂಚಿಸುವುದು ಹೆಚ್ಚು ಮುಖ್ಯವಾಗಿದೆ. ಡಾಪ್ಲರ್ ರಾಡಾರ್ 50-100 ಕಿಮೀ ತ್ರಿಜ್ಯ ಅವುಗಳ ಪರಿಣಾಮಕಾರಿತ್ವಕ್ಕೆ ಹೆಸರುವಾಸಿಯಾಗಿದೆ, ವಿವಿಧ ತರಂಗ ಬ್ಯಾಂಡ್‌ಗಳನ್ನು ಬಳಸುತ್ತದೆ ಮತ್ತು ಹೀಗಾಗಿ ಮಳೆಯ ತೀವ್ರತೆ, ಗಾಳಿಯ ದಿಕ್ಕು ಮತ್ತು ಚಂಡಮಾರುತದ ಚಲನೆಯಂತಹ ನಿರ್ಣಾಯಕ ಹವಾಮಾನ ನಿಯತಾಂಕಗಳನ್ನು ಒದಗಿಸುತ್ತದೆ. ನಮ್ಮ ರೈತರಿಗೆ ಸಕಾಲಿಕ ಹವಾಮಾನ ಮಾಹಿತಿಯೊಂದಿಗೆ ಕೃಷಿ ಪದ್ಧತಿಗಳನ್ನು ಉತ್ತಮಗೊಳಿಸಲು ಅಗಾಧವಾದ ಅವಕಾಶಗಳನ್ನು ತೆರೆಯುತ್ತದೆ ಎಂದು ಕಡಾಡಿ ಮಾಹಿತಿ ನೀಡಿದ್ರು.

ಮಾತ್ರವಲ್ಲದೆ ವಿಪತ್ತು ಸನ್ನದ್ಧತೆ ಮತ್ತು ನಿರ್ವಹಣೆಯನ್ನು ಹೆಚ್ಚಿಸಲು, ಜೀವಗಳನ್ನು ಉಳಿಸಲು ಮತ್ತು ನಷ್ಟವನ್ನು ತಗ್ಗಿಸಲು. ಪ್ರತಿಕೂಲ ಹವಾಮಾನ ಘಟನೆಗಳು ತಿಳಿಯಲು ಅನುಕೂಲವಾಗಲಿದೆ ಎಂದರು.

ಸಚಿವರು ಇದನ್ನು ಧನಾತ್ಮಕವಾಗಿ ಪರಿಗಣಿಸಿ, ಡಾಪ್ಲರ್ ರಾಡಾರಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ದೃಷ್ಠಿಕೋನದಂತೆ ಭಾರತದಲ್ಲಿ ತಯಾರಿಸಲಾಗುತ್ತಿದೆ. ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ ಅದರಿಂದ ವಿಳಂಬವಾಗಿದೆ. ಬೆಳಗಾವಿಯನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ಪರಿಶೀಲನೆ ಮಾಡುತ್ತೇನೆಂದು ಸಚಿವರು ಭರವಸೆ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *