ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಆಡಳಿತವಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ನಾವೇಕೆ ಶೇ 70 ರಷ್ಟು ಅನುದಾನ ಕೊಡಬೇಕು ಎಂದು ಸರ್ಕಾರಕ್ಕೆ ಪ್ರಶ್ನಿಸಿ ಲವ್ ಲೆಟರ್ ಕಳಿಸಿದ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ತಿರಗೇಟು ನೀಡಿ ನಿನ್ನೆ ಬೆಳಗಾವಿ ಮಹಾನಗರ ಪಾಲಿಕೆಗೆ ಬಿಗ್ ಶಾಕ್ ಕೊಟ್ಟಿದೆ.
ಬೆಳಗಾವಿ ಮಹಾನಗರದಲ್ಲಿ ತೆರಿಗೆ ದರವನ್ನು ಹೆಚ್ಚಿಸದೇ, ಸರ್ಕಾರದ ಆದೇಶವನ್ನು ಪಾಲಿಸದ ಬೆಳಗಾವಿ ಮಹಾನಗರ ಪಾಲಿಕೆಯನ್ನು ನಾವೇಕೆ, ಬರಕಾಸ್ತು ಮಾಡಬಾರ್ದು ಎಂದು ಪ್ರಶ್ನಿಸಿ ಪೌರಾಡಳಿತ ಇಲಾಖೆ,ನೋಟೀಸ್ ಕಳುಹಿಸಿದ್ದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಸೂಪರ್ ಸೀಡ್ ಹಲ್ ಚಲ್ ಶುರುವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಸರ್ಕಾರದ ನಡುವಿನ ಸಂಘರ್ಷ ಈಗ ವಿಕೋಪಕ್ಕೆ ಹೋಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪಾಲಿಕೆ ಅನುದಾನದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ಆಡಳಿತ ಗುಂಪಿಗೆ ಸರ್ಕಾರ ನೋಟೀಸ್ ಕೊಡುವ ಮೂಲಕ ತಮ್ಮ ಪರಮಾಧಿಕಾರದ ಸಂದೇಶ ನೀಡಿದೆ.
ಇಂದಿರಾ ಕ್ಯಾಂಟೀನ್ ನಿರ್ವಹಣೆ, ತೆರಿಗೆ ಹೆಚ್ಚಳ, ಪೌರಕಾರ್ಮಿಕರ ನೇಮಕಾತಿಯಲ್ಲಿ ಆಕ್ರಮ ಹೀಗೆ ಹಲವಾರು ವಿಚಾರಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ,ಪೌರಾಡಳಿತ ಇಲಾಖೆಗಳು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಿಗೆ ನೋಟೀಸ್ ಜಾರಿ ಮಾಡುವ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದೆ.
ನಿನ್ನೆಯಷ್ಟೇ ಸರ್ಕಾರ ಜಾರಿ ಮಾಡಿರುವ ನೋಟೀಸ್ ಬೆಳಗಾವಿ ಮಹಾನಗರ ಪಾಲಿಕೆಗೆ ಮುಟ್ಟಿದೆ.ನಗರಸೇವಕರಲ್ಲಿ ಸೂಪರ್ ಸೀಡ್ ಆತಂಕ ಶುರುವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆಯ ಅಕೌಂಟ್ ಸ್ಥಾಯಿ ಸಮೀತಿ ಇಂದಿರಾ ಕ್ಯಾಂಟೀನ್ ಬಗ್ಗೆ ಸರ್ಕಾರಕ್ಕೆ ಕಳುಹಿಸಿದ ನೋಟೀಸ್ ಬಿಜೆಪಿಗೆ ಮುಳುವಾಗುವ ಎಲ್ಲ ಸಾಧ್ಯತೆಗಳು ಗೋಚರವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯ 138 ಪೌರ ಕಾರ್ಮಿಕರ ನೇಮಕಾತಿ ವಿಚಾರ ಈಗ ವಿಕೋಪಕ್ಕೆ ಹೋಗಿದೆ. ಪೌರಕಾರ್ಮಿಕರು ಬೆಳಗಾವಿ ಪಾಲಿಕೆಯಲ್ಲಿ ಈಗ ಹೋರಾಟ ಆರಂಭಿಸಿದ್ದಾರೆ.ನೇಮಕಾತಿಯಲ್ಲಿ ಗೋಲ್ ನಡೆದಿರುವದು ಸ್ಪಷ್ಟವಾಗಿದೆ.138 ರ ವಿಚಾರ ಆಡಳಿತಾರೂಢ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿರುವದು ಸತ್ಯ.
ಪೌರಕಾರ್ಮಿಕರ ನೇಮಕಾತಿಯಲ್ಲಿ ಪೌರ ಕಾರ್ಮಿಕರಿಂದ ದುಡ್ಡು ವಸೂಲಿ ಮಾಡಿದವರು ಯಾರು..? ನಗರವನ್ನು ಸ್ವಚ್ಛ ಮಾಡುವ ಶ್ರಮಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಮಹಾನುಭಾವರು ಯಾರು ? ಅವರ ವಿರುದ್ಧ ಬಿಜೆಪಿ ನಾಯಕರು ಕ್ರಮ ಏಕೆ ಕೈಗೊಳ್ಳುತ್ತಿಲ್ಲ. ? ಪೌರ ಕಾರ್ಮಿಕರಿಂದ ದುಡ್ಡು ವಸೂಲಿ ಮಾಡಲಾಗಿದೆ.ಎನ್ನುವ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಸಚಿವ ಹಾಗೂ ಪೌರಾಡಳಿ ಸಚಿವರು ಇತ್ತೀಚಿಗೆ ಬೆಳಗಾವಿಗೆ ಬಂದು ಪಾಲಿಕೆ ಅಧಿಕಾರಿಗಳ ಜೊತೆ ಸಭೆ ಮಾಡಿ, ಪಾಲಿಕೆಯಲ್ಲಿ ನಡೆದಿರುವ ಪ್ರಮಾದಗಳ ಬಗ್ಗೆ ಪಟ್ಟಿ ಮಾಡಿಕೊಂಡು ಹೋಗಿದ್ದು, 138 ಪೌರ ಕಾರ್ಮಿಕರ ನೇಮಕಾತಿ ವಿಚಾರ ಈಗ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.