ಬೆಳಗಾವಿ- ಮೋಬೈಲ್ ಟಾವರ್ ಅಳವಡಿಕೆಗೆ ಸಂಭಂಧಿಸಿದಂತೆ ಇತ್ತೀಚಗೆ ನಗರಸೇವಕ ಅಭಿಜಿತ್ ಜವಳಕರ್ ಮತ್ತು ರಮೇಶ್ ಪಾಟೀಲ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆದಿದೆ ಎಂದು ಹೇಳಲಾಗಿತ್ತು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರ ಸೇವಕ ಅಭಿಜಿತ್ ಜವಳಕರ್ ನನ್ನು ನಿನ್ನೆ ತಡರಾತ್ರಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ನಗರಸೇವಕ ಅಭಿಜಿತ್ ಜವಳಕರ್ ಟಾವರ್ ಅಳವಡಿಕೆ ಕುರಿತು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ರಮೇಶ್ ಪಾಟೀಲ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ತಿಲಕವಾಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ರಮೇಶ್ ಪಾಟೀಲನನ್ನು ಬಂಧಿಸಲಾಗಿತ್ತು.
ರಮೇಶ್ ಪಾಟೀಲನಿಂದ ಹಲ್ಲೆಯಾಗಿದೆ ಎಂದು ದೂರು ನೀಡಿದ ಬಳಿಕ ಬಿಜೆಪಿ ನಗರಸೇವಕ ಅಭಿಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ,ಆದ್ರೆ ನಿನ್ನೆಯ ದಿನ ಎಂಇಎಸ್ ಕಾರ್ಯಕರ್ತರು ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ್ ಕೂಡಾ ರಮೇಶ್ ಪಾಟೀಲ ಮೇಲೆ ಹಲ್ಲೆ ಮಾಡಿದ್ದಾನೆ ಅಭಿಜಿತ್ ನನ್ನೂ ಬಂಧಿಸಬೇಕು ಎಂದು ತಿಲಕವಾಡಿ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಪೋಲೀಸರು ತಡರಾತ್ರಿ ನಗರಸೇವಕ ಅಭಿಜಿತ್ ಜವಳಕರ್ ನನ್ನು ಬಂಧಿಸಿದ್ದಾರೆ.
ನಗರಸೇವಕ ಅಭಿಜಿತ್ ಜವಳಕರ್ ಮತ್ತು ರಮೇಶ್ ಪಾಟೀಲ ನಡುವೆ ನಡೆದ ಟಾವರ್ ಜಗಳ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇಬ್ಬರ ನಡುವೆ ನಡೆದ ಈ ಜಗಳ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಪಾಲಿಟೀಕ್ಸ್ ಪವರ್ ಪ್ರದರ್ಶನಕ್ಕೆ ವೇದಿಕೆಯಾಗಿದೆ.ರಮೇಶ್ ಪಾಟೀಲ ಪರವಾಗಿ ಎಂಇಎಸ್ ನಿಂತಿದೆ.ನಗರಸೇವಕ ಅಭಿಜಿತ್ ಪರವಾಗಿ ಎಂಇಎಸ್ ನಿಂತಿದೆ.
ನಗರಸೇವಕ ಅಭಿಜಿತ್ ಜವಳಕರ್ ಬಂಧನ ವಿರೋಧಿಸಿ ಮಾಜಿ ಶಾಸಕ ಅನೀಲ್ ಬೆನಕೆ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.