Breaking News
Home / Breaking News / ಬೆಳಗಾವಿ ಪೋಲೀಸ್ ಕಮಿಷನರ್ ಕಚೇರಿ ಎದುರು ಧರಣಿ…!!

ಬೆಳಗಾವಿ ಪೋಲೀಸ್ ಕಮಿಷನರ್ ಕಚೇರಿ ಎದುರು ಧರಣಿ…!!

ಬೆಳಗಾವಿ-ಬಿಜೆಪಿ ನಗರ ಸೇವಕ ಅಭಿಜಿತ್ ಬಂಧನ ಖಂಡಿಸಿ ಬೆಳಗಾವಿ ಬಿಜೆಪಿ ಮುಖಂಡರು, ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಧರಣಿ ನಡೆಸಿ,ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಹಾ ನಗರ ಪಾಲಿಕೆ ಮೇಯರ್ ಶೋಭಾ ಸೋಮ‌ನಾಚೆ, ಮಾಜಿ ಶಾಸಕರಾದ ಸಂಜೆಯ್ ಪಾಟೀಲ್, ಅನಿಲ್ ಬೆನಕೆ ,ಧನಂಜಯ ಜಾದವ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ನವೆಂಬರ್ 23 ರಂದು ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ಬಿಜೆಪಿ ನಗರ ಸೇವಕ ಅಭಿಜಿತ್ ಹಾಗೂ ಸ್ಥಳಿಯ ರಮೇಶ್ ಪಾಟೀಲ ನಡುವೆ ಗಲಾಟೆ ನಡೆದಿತ್ತು.ನಗರ ಸೇವಕ‌ ಅಭಿಜಿತ್ ಬಂದಿಸುವಂತೆ ರಮಾಕಾಂತ್ ಕೂಂಡೂಸ್ಕರ ನೇತೃತ್ವದಲ್ಲಿ ನಿನ್ನೆ ಸಂಜೆ ಪ್ರತಿಭಟನೆ ನಡೆದಿತ್ತು.ಪ್ರತಿಭಟನೆ ಹಿನ್ನೆಲೆಯಲ್ಲಿ ತಡರಾತ್ರಿಯಲ್ಲಿ ನಗರ ಪೊಲೀಸರು ಅಭಿಜಿತ್ ನನ್ನ ಬಂದಿಸಿದ್ದರು.ಇಂದು ಬೆಳಿಗ್ಗೆ ‌ಬಂಧನ ‌ಖಂಡಿಸಿ ಪೋಲಿಸ್ ಆಯುಕ್ತರ ಕಚೇರಿಯ ಮುಂದೆ ಧರಣಿ ನಡೆಸಿದ ಬಿಜೆಪಿ ನಾಯಕರು.ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ಜಚೇರಿ ಎದುರು ಪ್ರತಿಭಟನೆ ಮಾಡಿದ್ರು

ನಂತರ ಕಮೀಷ್ನರ್ ಅವರನ್ನು ಭೇಟಿಯಾದ ಬಿಜೆಪಿ ನಿಯೋಗ,ಬಳಿಕ ಮಾಧ್ಯಮಗಳಿಗೆ ಮಹಾನಗರ ಬಿಜೆಪಿ ಅಧ್ಯಕ್ಷ ಅನಿಲ್ ಬೆನಕೆ ಹೇಳಿಕೆ ನೀಡಿದ್ರು.ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳ ಒತ್ತಡಕ್ಕೆ‌ ಮಣಿದು ಬಿಜೆಪಿ ಸದಸ್ಯನನ್ನು ಬಂಧಿಸಲಾಗಿದೆ.ಮಹಾನಗರ ‌ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವ ಉದ್ದೇಶ ಕಾಂಗ್ರೆಸ್ ಮುಖಂಡರಿಗಿದೆ.ಆ ಕಾರಣಕ್ಕೆ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರನ್ನು ಅಂಜಿಸುವ ಕೆಲಸವನ್ನು ಕಾಂಗ್ರೆಸ್ ‌ಮಾಡ್ತಿದೆ.ಈ ಕಾರಣಕ್ಕೆ ನಮ್ಮ ಸದಸ್ಯ ಅಭಿಜಿತ್ ಜವಳಕರನ್ನು ಬಂಧಿಸಲಾಗಿದೆ.ಟ್ರಿಟ್ಮೆಂಟ್ ತೆಗೆದುಕೊಳ್ಳುವಾಗಲೇ ನಮ್ಮ ಸದಸ್ಯನ ಬಂಧನವಾಗಿದೆ ಎಂದು ಅನೀಲ ಬೆನಕೆ ಆರೋಪಿಸಿದರು‌.

ಅವರು ಡಿಸ್ಚಾರ್ಜ್ ಕೂಡ ಆಗಿಲ್ಲ, ಆಸ್ಪತ್ರೆಯ ಬಿಲ್ ಕೂಡ ಪಾವತಿಸಿರಲಿಲ್ಲ.ಪೊಲೀಸರು ರಾತ್ರೋರಾತ್ರಿ ಆಸ್ಪತ್ರೆಯಿಂದಲೇ ಅಭಿಜಿತ್‌ರನ್ನು ಬಂಧಿಸಿದ್ದಾರೆ.ಈ ಕಾರಣಕ್ಕೆ ನಾವು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ವಿ.ನಮ್ಮ ಸದಸ್ಯನ ಬಂಧಿಸಿದ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕೆಂಬ ಬೇಡಿಕೆ ನಮ್ಮದಾಗಿತ್ತು.ಕಮೀಷ್ನರ್ ‌ನಮ್ಮ‌ ಮನವಿಗೆ ಸ್ಪಂದಿಸಿಲ್ಲ, ಅವರನ್ನು ಭೇಟಿಯಾಗಿ ಚರ್ಚಿಸಿದ್ದು ನಮಗೆ ತೃಪ್ತಿ ‌ತಂದಿಲ್ಲ.ಹೀಗಾಗಿ ಕೋರ್ ಕಮಿಟಿ ಮೀಟಿಂಗ್ ಮಾಡಿ ನಾವು ಹೋರಾಟಕ್ಕೆ ಸಿದ್ಧರಾಗುತ್ತೇವೆ.ಎಂದು ಅನೀಲ ಬೆನಕೆ ಎಚ್ಚರಿಕೆ ನೀಡಿದ್ರು.

ಉಸ್ತುವಾರಿ ಸಚಿವ ಸೇರಿ ಕಾಂಗ್ರೆಸ್ ‌ನಾಯಕರ ಅಣತಿಯಂತೆ ‌ಪೊಲೀಸರು ಕೆಲಸ ಮಾಡ್ತಿದ್ದಾರೆ.ಈ ಕುರಿತು ತನಿಖೆ ಮಾಡಿ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು.ಅಭಿಜಿತ್ ಲ್ಲಿಸಿದ ದೂರು, ಸಾಕ್ಷ್ಯ ಆಧರಿಸಿ ಈ ಮೊದಲು ರಮೇಶ್ ಪಾಟೀಲ ಬಂಧಿಸಲಾಗಿತ್ತು.ಅದೇ ದಿನ ಅಭಿಜಿತ್ ಜವಳಕರ ಬಂಧಿಸಬೇಕಿತ್ತು, ಮೂರು ದಿನವೇಕೆ ಕಾದರುಎಂಇಎಸ್‌-ಕಾಂಗ್ರೆಸ್ ಸೇರಿಯೇ ಪಾಲಿಕೆ ಸೂಪರ್‌ಸೀಡ್ ಮಾಡುವ ಯತ್ನ ನಡೆದಿದೆ.ಕಾಂಗ್ರೆಸ್‌ ಬೆದರಿಕೆಗೆ ನಾವು ಹೆದರಲ್ಲ, ಕಾಂಗ್ರೆಸ್ ‌ಸರ್ಕಾರದ ವಿರುದ್ಧ ಹೋರಾಡುತ್ತೇವೆ.ಮೇಯರ್ ಅವರನ್ನು ಅಪಮಾನಿಸುವ ಕೆಲಸವನ್ನು ಪೋಲಿಸರು ಮಾಡ್ತಿದ್ದಾರೆ.ಕಮೀಷ್ನರ್ ‌ಕಚೇರಿಗೆ ಬಂದರೆ ನಮ್ಮನ್ನು ಹೊರಗೆ ನಿಲ್ಲಿಸಿ ಅಪಮಾನಿಸಿದ್ದಾರೆ.ನಾವು ಮೊದಲೇ ಕಮೀಷ್ನರ್ ಸಮಯಾವಕಾಶ ಕೇಳಿಯೇ ಬಂದಿದ್ವಿ.ಆದರೂ ಹೊರಗೆ ನಿಲ್ಲಿಸಿ ನಮಗೆ ಅಪಮಾನಿಸಿದ್ದಾರೆ ಎಂದು ಬೆನಕೆ ಆರೋಪ ಮಾಡಿದ್ದಾರೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *