ಬೆಳಗಾವಿ-ದೇಶದ ಗಮನ ಸೆಳೆದಿದ್ದ ಬೃಹತ್ ಕಾರ್ಯಾಚರಣೆಯಲ್ಲಿ 41 ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೆಳಗಾವಿಯವರು ಅನ್ನೋದು ಹೆಮ್ಮೆಯ ಸಂಗತಿಯಾಗಿದೆ.
ಉತ್ತರಖಾಂಡದ ಉತ್ತರಕಾಶಿಯಲ್ಲಿ ಸುರಂಗ ಮಾರ್ಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಕಾರ್ಯಾಚರಣೆಯಲ್ಲಿ,17 ದಿನಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ 41 ಕಾರ್ಮಿಕರ ರಕ್ಷಣೆ ಮಾಡಲಾಗಿತ್ತು.ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳಗಾವಿ ಇಬ್ಬರು ಇಂಜನಿಯರ್ ಭಾಗಿಯಾಗಿದ್ದು ಸಂತಸದ ವಿಚಾರವಾಗಿದೆ.
ಚೆನ್ನೈ ಮೂಲದ ಎಲ್ ಆ್ಯಂಡ್ ಟಿ ಕಂಪನಿಯ ಇಬ್ಬರು ಇಂಜಿನಿಯರ್‌ಗಳು ರೆಸ್ಕ್ಯೂ ಆಪರೇಶನ್‌ನಲ್ಲಿ ಭಾಗಿಯಾಗಿದ್ದರು.ಎಲ್ ಆ್ಯಂಡ್ ಕಂಪನಿಯ ಸಿಬ್ಬಂದಿಗಳಾದ ಬಾಲಚಂದ್ರ ಕಿಲಾರಿ, ದೌದೀಪ್ ಖಂಡ್ರಾ ಭಾಗಿಯಾಗಿದ್ದರು.ಕಾರ್ಮಿಕರು ಬದುಕುಳಿದಿರುವುದನ್ನು ಪತ್ತೆ ಹಚ್ಚಿದ್ದೇ ಬೆಳಗಾವಿಯ ಇಂಜಿನಿಯರ್‌ಗಳು ಬೆಳಗಾವಿಯವರು ಎನ್ನುವದು ವಿಶೇಷ ಸಂಗತಿಯಾಗಿದೆ.
ಎಂಡಸ್ಕೊಪಿ ಕ್ಯಾಮರಾ ಮೂಲಕ ಕಾರ್ಮಿಕರು ಸುರಕ್ಷಿತವಾಗಿ ಬದುಕುಳಿದಿರುವ ಬಗ್ಗೆ ಪತ್ತೆ ಹಚ್ಚಿದ್ದೇ ಬೆಳಗಾವಿ ಇಂಜಿನಿಯರ್ಸ್ ಗಳು,ಬೆಳಗಾವಿಯ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೆ ಟೆಂಡರ್ ಹಿಡಿದಿರುವ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ,ಪೈಪ್‌ಲೈನ್‌ನ ವಾಟರ್ ಲೀಕೇಜ್ ಪತ್ತೆ ಹಚ್ಚಲು ಎಲ್ ಆ್ಯಂಡ್ ಟಿ ಕಂಪನಿ ಬಳಸ್ತಿದೆ ಎಂಡಸ್ಕೊಪಿ ಕ್ಯಾಮರಾ ಈ ಕ್ಯಾಮರಾದಿಂದಲೇ ಸುರಂಗದಲ್ಲಿ 41 ಜನ ಕಾರ್ಮಿಕರು ಬದುಕಿದ್ದಾರೆ ಎನ್ನುವದು ಗೊತ್ತಾಗಿತ್ತು.
ನವೆಂಬರ್ 17 ಕ್ಕೆ ಉತ್ತರಕಾಶಿಯ ಘಟನಾ ಸ್ಥಳಕ್ಕೆ ತೆರಳಿದ್ದ ಬೆಳಗಾವಿಯ ಇಂಜಿಯರ್ಸ್,ನಂತರ 9 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಇಬ್ಬರು ಇಂಜಿನಿಯರ್ಸ್ ಗಳು ಕಾರ್ಯಾಚರಣೆ ಅನುಭವ ಬೆಳಗಾವಿ ಮಾದ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.