Breaking News

ಡಿ 5ರಿಂದ 8ರವರೆಗೆ ಡಾ. ಶಿವಬಸವಸ್ವಾಮೀಜಿ 134ನೇ ಜಯಂತಿ ಮಹೋತ್ಸವ

ಬೆಳಗಾವಿ: ಡಿಸೆಂಬರ್ ತಿಂಗಳ 5 ರಿಂದ 8 ರವರೆಗೆ ನಾಗನೂರು ರುದ್ರಾಕ್ಷಿ ಮಠದಲಿಂಗೈಕ್ಯ ಕಾಯಕಯೋಗಿ, ಮಹಾಪ್ರಸಾದಿ, ಡಾ.ಶಿವಬಸವ ಮಹಾಸ್ವಾಮಿಗಳವರ 134 ನೆಯ ಜಯಂತಿಮಹೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಜಿವರ
ಸನ್ನಿಧಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿ ನಾಗನೂರು
ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರು ವಹಿಸಲಿದ್ದಾರೆ.

ಬೆಳಗಾವಿ ಶಿವಬಸವ ನಗರದಲ್ಲಿರುವ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳವಾರ ದಿನಾಂಕ 5 ರಂದು ಮುಂಜಾನೆ9.30 ಗಂಟೆಗೆ ಶೆಗುಣಿಶಿ ವಿರಕ್ತಮಠದ ಮಹಾಂತ ಪ್ರಭು ಮಹಾಸ್ವಾಮೀಜಿಯವರು ಷಟಸ್ಥಲ
ಧ್ವಜಾರೋಹಣ ನೆರವೇರಿಸುವುದರೊಂದಿಗೆ ನಾಲ್ಕು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ
ನೀಡಲಿದ್ದಾರೆ.

ಅದೇ ದಿವಸ ಸಂಜೆ 6 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಲಿದ್ದುಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು
ವಹಿಸಲಿದ್ದು ಅಧ್ಯಕ್ಷತೆಯನ್ನು ಹುಕ್ಕೇರಿ ವಿರಕ್ತಮಠದ ಶ್ರೀ.ಶಿವಬಸವಮಹಾಸ್ವಾಮಿಜಿಯವರು ವಹಿಸಲಿದ್ದಾರೆ. ಸಮ್ಮುಖದಲ್ಲಿ ಶಿವಪುರ ಕೆ.ಎಚ್. ನ
ಶಿವಲಿಂಗೇಶ್ವರ ಮಠದ ಶ್ರೀ.ಅಭಿನವ ಶಿವಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಮುದುಗಲ್ ತಿಮ್ಮಾಪೂರದ ಕಲ್ಯಾಣಾಶ್ರಮದ ಶ್ರೀ. ಮಹಾಂತ ಸ್ವಾಮೀಜಿ ಅವರಿಗೆ ಗೌರವ
ಸನ್ಮಾನ ನೀಡಲಾಗುತ್ತಿದೆ, ಅದೇ ರೀತಿ “ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರತರಾದ”ವಿಜಯಪುರದ ಶ್ರೀ ಫ.ಗು. ಸಿದ್ದಾಪುರ, ಇಳಕಲ್ಲದ ಡಾ. ಶಂಭು ಬಳಿಗಾರ, ಎಂ ಕೆ
ಹುಬ್ಬಳ್ಳಿಯ ಡಾ.ಬಾಳೇಶ್ ಭಜಂತ್ರಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಶ್ರೀ.ಮಠದಿಂದ ಕೊಡ ಮಾಡಲಾಗುವ “ಕನ್ನಡ ನುಡಿಶ್ರೀ” ಪ್ರಶಸ್ತಿಯನ್ನು ನಿಪ್ಪಾಣಿಯಶ್ರೀ.ಮಿಥುನ್ ಅಂಕಲಿ , ಅಥಣಿಯ ಶ್ರೀ. ಚನ್ನಯ್ಯ ಹಿಟ್ನಾಳಮಠ, ಬೆಳಗಾವಿಯ
ಶ್ರೀ.ಮಹಬೂಬ್ ಮಕಾಂದರ್, ಸಂಕ್ ಗ್ರಾಮದ ಶ್ರೀ.ಆರ್. ಜಿ. ಬಿರಾದರ್ ಅವರುಗಳಿಗೆಪ್ರಶಸ್ತಿ ಪ್ರದಾನ ಮಾಡಲಾಗುವುದು.ಎರಡನೇ ದಿನವಾದ ದಿ.6 ಬುಧವಾರದಂದು ಸಂಜೆ 6 ಗಂಟೆಗೆ ಸಿದ್ದರಾಮೇಶ್ವರ ಶಿಕ್ಷಣ
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ “ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿ
ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿ- ಕಡೋಲಿಯ
ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ. ಗುರುಬಸವಲಿಂಗ ಮಹಾಸ್ವಾಮಿಗಳು
ವಹಿಸಲಿದ್ದು, ಸಮಾರಂಭದ ನೇತೃತ್ವವನ್ನು ಅಥಣಿಯ ಮೋಟಗಿಮಠದ ಶ್ರೀ.ಪ್ರಭು ಚನ್ನಬಸವ
ಮಹಾಸ್ವಾಮಿಗಳು ವಹಿಸಲಿದ್ದಾರೆ, ಸಮ್ಮುಖದಲ್ಲಿ ರಾವೂರ್ ವಿರಕ್ತ ಮಠದ ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ನಾಗನೂರು
ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ
ರೊಟ್ಟಿ ವಹಿಸಲಿದ್ದಾರೆ.

ಮುಂಬೈನ ಆಧ್ಯಾತ್ಮ ಕೇಂದ್ರ ಭಕ್ತಿ ವೇದಾಂತ ಆಸ್ಪತ್ರೆಯ ಪ್ರಾಧ್ಯಾಪಕರಾದ ಶ್ರೀಮತಿ.ಡಾ.ಕೋಮಲ್ ದಲಾಲ ಅವರಿಗೆ “ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿಯನ್ನು ನೀಡಿ
ಗೌರವಿಸಲಾಗುವುದು.ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಕೊಡೆಮಾಡಲಾಗುವ “ಪ್ರಸಾದ ಶ್ರೀ ಗೌರವ”
ಪ್ರಶಸ್ತಿಯನ್ನು ಬೆಳಗಾವಿಯ ಶ್ರೀ. ವೈ .ಎನ್. ಶಿಂತ್ರೆ , ಶೇಗುಣಸಶಿಯ ಶ್ರೀ.ಮಲ್ಲಪ್ಪ ಬಸಗೌಡ ಗೌಡಪ್ಪನವರ್, ಬೆಳಗಾವಿಯ ಶ್ರೀ. ಬಸಲಿಂಗಪ್ಪ ರುದ್ರಪ್ಪ ಮೆಳವಂಕಿ,
ಬೆಳಗಾವಿಯ ಶ್ರೀ ಜಿ.ಎನ್. ಪಾಟೀಲ್ ಇವರುಗಳಿಗೆ ನೀಡಿ ಗೌರವಿಸಲಾಗುತ್ತಿದೆ.

ಮೂರನೇ ದಿನವಾದ ಗುರುವಾರ ದಿ. 7ರಂದು 1969 ರಲ್ಲಿ ಲಿಂಗೈಕ್ಯ ಡಾ. ಶಿವಬಸವಮಹಾಸ್ವಾಮಿಗಳವರಿಂದ ಸ್ಥಾಪಿತಗೊಂಡ ಶ್ರೀ. ಸಿದ್ದರಾಮೇಶ್ವರ ಪ್ರೌಢಶಾಲೆ ಹಾಗೂ
ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ . ಕಾರ್ಯಕ್ರಮವನ್ನುನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ.ಜಾಮದಾರ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳುವಹಿಸಲಿದ್ದು, ಅಧ್ಯಕ್ಷತೆಯನ್ನು ಹಂದಿಗುದ ವಿರಕ್ತಮಠದ ಶ್ರೀ. ಶಿವಾನಂದ
ಮಹಾಸ್ವಾಮಿಗಳು ವಹಿಸಲಿದ್ದು, ನೇತೃತ್ವವನ್ನು ಚೆನ್ನಮ್ಮನ ಕಿತ್ತೂರಿನ ರಾಜಗುರುಸಂಸ್ಥಾನ ಕಲ್ಮಠದ ಶ್ರೀ.ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪಿಜಿ ಹುಣಶ್ಯಾಳದ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ. ನಿಜಗುಣ
ದೇವರು ಅವರಿಗೆ ಷಷ್ಟಿಪೂರ್ತಿ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಶ್ರೀ.ಕೆ.ಬಿ.ಗುಡಿಸಿ ಅವರುಸ್ಮರಣಸಂಚಿಕೆಯನ್ನುಲೋಕಾರ್ಪಣೆಗೊಳಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ
ಶ್ರೀ.ಶರಣಗೌಡ ಬಯ್ಯಾಪುರ, ಬಾಗಲಕೋಟೆಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ
ಶ್ರೀ.ಶಶಿಧರ ಬಗಲಿ, ಪುಣೆಯ ಉದ್ಯಮಿ ಶ್ರೀ. ಅಣ್ಣಾರಾಯ ಬಿರಾದಾರ್, ವಿಜಯಪುರದ
ಕೈಗಾರಿಕಾ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಶ್ರೀ. ಮಹಾಂತೇಶ್ ಬಿರಾದರ್, ಬೆಳಗಾವಿಯ
ಹಿರಿಯ ನ್ಯಾಯವಾದಿ ಶ್ರೀ. ದಿನೇಶ್ ಪಾಟೀಲ್, ಕೊಪ್ಪಳದ ಅಧ್ಯಕ್ಷ ಶ್ರೀ.ಶಿವಾನಂದಮೂಲಿಮನಿ, ನಕ್ಕುಂದಿಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ.ಮಲ್ಲನಗೌಡ ಪಾಟೀಲ್,
ಮುಂಡರಗಿಯ ಎಇಇ ಶ್ರೀ.ಅಶೋಕ್ ಕಣವಿ ಮತ್ತು ವೈದ್ಯ ಡಾ.ಈಶ್ವರ ಕಣಬೂರ ಇವರುಗಳು
ಆಗಮಿಸಲಿದ್ದಾರೆ.

ನಾಲ್ಕನೆಯ ದಿನವಾದ ಶುಕ್ರವಾರ ದಿ.8 ರಂದು ಮುಂಜಾನೆ 10.30 ಗಂಟೆಗೆ ಲಿಂಗೈಕ್ಯ
ಡಾ.ಶಿವಬಸವ ಮಹಾಸ್ವಾಮಿಗಳವರ 134 ನೇ ಜಯಂತಿ ಮಹೋತ್ಸವ ಮತ್ತು ಸೇವಾ ರತ್ನ ಪ್ರಶಸ್ತಿ
ಪ್ರದಾನ ಸಮಾರಂಭ ಅಲ್ಲದೆ ಶ್ರೀ.ಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ
ಹಾಗೂ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ನೂತನ ಕಟ್ಟಡದ
ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮಗಳ ಸಾನಿಧ್ಯವನ್ನು ಗದುಗಿನ ತೋಟದಾರ್ಯ ಮಠದ ಜಗದ್ಗುರು ಡಾ. ತೋಂಟದ
ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಬೈಲೂರು ನಿಷ್ಕಲ ಮಂಟಪದ
ಶ್ರೀ. ನಿಜಗುಣಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ, ನೇತೃತ್ವವನ್ನು ಕಲಬುರ್ಗಿ
ಗಚ್ಚಿನಮಠದ ಶ್ರೀ. ಶಿವಬಸವ ಮಹಾಸ್ವಾಮಿಗಳು ವಹಿಸಲಿದ್ದು ಸಮ್ಮುಖದಲ್ಲಿ ಕಲಬುರ್ಗಿ
ಗದ್ದುಗೆ ಮಠದ ಶ್ರೀ.ಚರಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಶ್ರೀ ಮಠದಿಂದ ಕೊಡ ಮಾಡಲಾಗುವ “ಸೇವಾರತ್ನ ಪ್ರಶಸ್ತಿ” ಯನ್ನು ಗದುಗಿನ ತೋಂಟದಾರ್ಯ
ವಿದ್ಯಾಪೀಠದ ಆಡಳಿತಾಧಿಕಾರಿ ಶ್ರೀ. ಸಿದ್ದಲಿಂಗ ಪಟ್ಟಣಶೆಟ್ಟಿ, ಗೋಕಾಕದ ವಿಶ್ರಾಂತ
ಪ್ರಾಧ್ಯಾಪಕ ಶ್ರೀ.ಸಿ ಕೆ ನಾವಲಗಿ , ಬೈಲಹೊಂಗಲದ ಶ್ರೀ. ಮುರಿಗೆಪ್ಪ ಜಿಗಿಜಿನ್ನಿ,
ಘಟಪ್ರಭಾದ ಶ್ರೀ.ಜಿ.ಎ. ಪತ್ತಾರ , ಗದುಗಿನ ಅನರ್ಘ್ಯ ಸಂಗೀತ ಪಾಠಶಾಲೆಯ ಶ್ರೀಮತಿ.
ವನಮಾಲಾ ಮಾನಶೆಟ್ಟಿ, ಬೆಳಗಾವಿಯ ಶ್ರೀ. ಸಿ .ಎಂ. ಬೂದಿಹಾಳ ಇವರುಗಳಿಗೆ ನೀಡಿ
ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಹಲವು ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.