ಬೆಳಗಾವಿ- ಬೆಳಗಾವಿ ನಗರ ವ್ಯಾಪ್ತಿ ಮತ್ತು ಜಿಲ್ಲೆಯಲ್ಲಿ ಇಲ್ಲಿಯ ಘನತೆ ಗೌರವಕ್ಕೆ ಧಕ್ಕೆ ತರುವ ತಲೆ ತಗ್ಗಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಎನ್ನುವ ಮುನ್ಸೂಚನೆಯನ್ನು ನೀಡುತ್ತಿವೆ.ಈಗಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಮಹಿಳೆ ತನ್ನ ಜಮೀನಿನಲ್ಲಿ ಹಾದು ಹೋಗಿದ್ದ ಪೈಪ್ ಲೈನ್ ತೆರವು ಮಾಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ
ಒಂಟಿಯಾಗಿರುವ ಮಹಿಳೆಯನ್ನ ಟಾರ್ಗೆಟ್ ಮಾಡಿ ಆಗಾಗಾ ಕ್ಯಾತೆ ತೆಗೆದು ಅವಳ ಮೇಲೆ ಹಲ್ಲೆ ಮಾಡಿ ಆ ಒಂಟಿ ಮಹಿಳೆಯ ಮೈಮೇಲಿನ ಬಟ್ಟೆ ಹರಿದು ಥಳಿಸಿದ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಕಳೆದ ಹತ್ತು ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ಸದಸ್ಯರು ಕೂಡಿಕೊಂಡು ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಬೆಳಕಿಗೆ ಬಂದಿದೆ.ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು,ಇಪ್ಪತ್ತು ಜನರರಿಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು ಹಾಕಿಕೊಂಡಿದ್ದ ಬಟ್ಟೆ ಹರಿದು ಗಲಾಟೆ ಮಾಡಿದ್ದಾರೆ ಎಂದು ಒಂಟಿ ಮಹಿಳೆ ಆರೋಪಿಸಿದ್ದಾಳೆ.
ಈ ನೊಂದ ಮಹಿಳೆನ್ಯಾಯ ಕೇಳಿ,ಬೈಲಹೊಂಗಲ ಪೊಲೀಸ್ ಠಾಣೆಗೆ ಹೋದ್ರೂ ದೂರು ದಾಖಲಿಸಿಲ್ಲ.ನಂತರ ಈ ಮಹಿಳೆ
ಬೆಳಗಾವಿಯ ಎಸ್ ಪಿ ಕಚೇರಿಗೆ ಆಗಮಿಸಿ ಎಸ್ ಪಿ ಭೀಮಾಶಂಕರ್ ಗುಳೇದ್ ಗೆ ಭೇಟಿ ಮಾಡಿ
ತನ್ನ ಮೇಲೆ ಆದ ದೌರ್ಜನ್ಯವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ನಂತರಎಸ್ ಪಿ ಸೂಚನೆ ಮೇರೆಗೆ ಜಿಲ್ಲಾ ಮಹಿಳಾ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದೆ.
ಕಲ್ಲಪ್ಪ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ್, ಸಾಧಿಕ್, ಇಸ್ಮಾಯಿಲ್ ಸೇರಿ ಇಪ್ಪತ್ತು ಜನರ ಮೇಲೆ ದೂರು ದಾಖಲಾಗಿದೆ.ಐಪಿಸಿ 1860 ಅಡಿ 143, 147, 354(a), 354(b), 323, 324, 384, 201, 427, 342, 307, 504, 505, 149 ಸೆಕ್ಷನ್ ಅಡಿಯಲ್ಲಿ ದೂರು ದಾಖಲು ಮಾಡಲಾಗಿದ್ದು ತನಿಖೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಈ ಗ್ರಾಮ ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿದೆ.