Breaking News
Home / Breaking News / ಹೆಂಡತಿ ಜೊತೆಗಿನ ಖಾಸಗಿ ಕ್ಷಣಗಳನ್ನು ರಿಕಾರ್ಡ್ ಮಾಡಿದ ಗಂಡ,ಜೈಲಿಗೆ…!!

ಹೆಂಡತಿ ಜೊತೆಗಿನ ಖಾಸಗಿ ಕ್ಷಣಗಳನ್ನು ರಿಕಾರ್ಡ್ ಮಾಡಿದ ಗಂಡ,ಜೈಲಿಗೆ…!!

ಬೆಳಗಾವಿ – ಇಡೀ ಸಮಾಜವೇ ಶಾಕ್ ಆಗುವ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಹೆಂಡತಿಯ ಜತೆಗಿನ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿ.ಮತ್ತೆ ಹೆಂಡತಿಗೆ ಗಂಡನೇ ಬ್ಲ್ಯಾಕ್ ಮೇಲ್ ಮಾಡಿದ ಗಂಡ ಜೈಲು ಪಾಲಾದ ಕರಾಳ ಕಹಾನಿ ಇದಾಗಿದೆ.

*ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿ, ಫೋಟೊ ತೆಗೆದ ಪಾಪಿ ಗಂಡ ಮತ್ತೊಂದು ಮದುವೆ ಮಾಡಿಕೊಳ್ಳಲು, ಹೆಂಡತಿಯಿಂದ ವಿಚ್ಛೇದನ ಪಡೆಯಲು ಬ್ಲ್ಯಾಕ್ ಮೇಲ್ ಮಾಡಿದಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ನೀಚ ಕೃತ್ಯ ಈಗ ಬೆಳಕಿಗೆ ಬಂದಿದೆ.

*ವಿಚ್ಛೇದನ ನೀಡು ಇಲ್ಲವಾದ್ರೇ ಅಶ್ಲೀಲ ವಿಡಿಯೋ, ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ
ಗಂಡನ ಮಾತುಕತೆಗಳನ್ನ ಕೇಳಿ ಶಾಕ್ ಗೆ ಒಳಗಾದ ಹೆಂಡತಿ.ಸಾಕಷ್ಟು ಬಾರಿ ಮನವೊಲಿಸಲು ಯತ್ನಿದ್ರೂ ಆಗದ ಪ್ರಯೋಜನ ಆಗದೇ ಇರುವದರಿಂದ ಹೆಂಡತಿ ಕೊನೆಗೆ ಪೋಲೀಸ್ ಠಾಣೆಯ ಮೇಟ್ಟಲೇರಿದ್ದಾಳೆ.

ಹೆಂಡತಿ ಠಾಣೆಗೆ ಹೋದ ಬಳಿಕಇತ್ತ ವಿಚ್ಛೇದನ ಕೋರಿ ಗಂಡ ಕೋರ್ಟ್ ಮೆಟ್ಟಿಲೇರಿದ್ದಾನೆ.ಕೋರ್ಟ್‌ಗೆ ಹೋದ ಬಳಿಕವೂ ಹೆಂಡತಿಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಇದರಿಂದ ದಿಕ್ಕೆ ತೋಚದಾಗಿ ಪೊಲೀಸರ ಮೊರೆ ಹೋದ ಮಹಿಳೆ.ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ
ಕೇಸ್ ಬಳಿಕ ಠಾಣೆಗೆ ಕಿರಣ್ ಪಾಟೀಲ್ ಕರೆಯಿಸಿ ವಿಚಾರಣೆ ನಡೆಸಿದಾಗಈ ವೇಳೆ ಆತನ ಮೊಬೈಲ್ ನಲ್ಲಿ ಹೆಂಡತಿ ಅಶ್ಲೀಲ ವಿಡಿಯೋ, ಫೋಟೊ ಇರುವುದು ಬೆಳಕಿಗೆ ಬಂದಿದೆ.ತಕ್ಷಣ ಅರೆಸ್ಟ್ ಮಾಡಲು ಮುಂದಾದಾಗ ತಪ್ಪಿಸಿಕೊಂಡು ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಕಿರಣ್ ಪಾಟೀಲನನ್ನು ಪೋಲೀಸರುಕೂಡಲೇ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.ಸದ್ಯ ಗುಣಮುಖನಾಗಿ ನಿನ್ನೆಯಷ್ಟೇ ಹಿಂಡಲಗಾ ಜೈಲು ಸೇರಿದ ಪಾಪಿ ಗಂಡ ಕಿರಣ್ ಪಾಟೀಲ್.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *