Breaking News

ಅಂಗನವಾಡಿ ಶಿಕ್ಷಕಿಯ ,ಮೂಗು ಕತ್ತರಿಸಿದ ಆರೋಪಿ ಅರೆಸ್ಟ್…

ಬೆಳಗಾವಿ- ಅಂಗನವಾಡಿ ಮಕ್ಕಳು ಮನೆ ಮುಂದಿನ ತೋಟದಲ್ಲಿ ಹೂವು ಕಿತ್ತ ಬಸುರ್ತೆ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಘಟನೆಯ ಹಿನ್ನಲೆಯಲ್ಲಿ ಅಂಗನವಾಡಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿದ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ.

ಕಾಕತಿ ಪೊಲೀಸ್ ಠಾಣಿ ವ್ಯಾಪ್ತಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಮೀರಾ ಮೋರೆ ರವರೊಡನೆ ಜಗಳವಾಡಿ ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರ ಸಂ. 02/2024 ಕಲಂ. 326 ಐಪಿಸಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿತನಾದ ಕಲ್ಲಪ್ಪ @ ಕಲ್ಯಾಣಿ ಜ್ಯೋತಿಬಾ ಮೋರೆ ವಯಸ್ಸು 44 ವರ್ಷ ಸಾ|| ದತ್ತ ಗಲ್ಲಿ, ಬಸುರ್ತೆ ಗ್ರಾಮ. ಈತನನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *