ಬೆಳಗಾವಿ-ಬೈಲಹೊಂಗಲ್ ತಾಲ್ಲೂಕಿನಸಂಗೊಳ್ಳಿಯಲ್ಲಿ ಬುಧವಾರ(ಜ.17) ಮಧ್ಯಾಹ್ನ 12 ಗಂಟೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಾಂತಿವೀರ ಸಂಗೊಳ್ಳಿ ಉತ್ಸವ, ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ಶಿಲ್ಪವನ(ರಾಕ್ ಗಾರ್ಡನ್) ಉದ್ಘಾಟಿಸಲಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿಯ ಸಾಂಭ್ರಾ ವಿಮಾನ ನಿಕ್ಧಾಣಕ್ಕೆ ಆಗಮಿಸುವ ಅವರು ಹೆಲಿಕಾಪ್ಟರ್ ಮೂಲಕ ಸಂಗೊಳ್ಳಿ ಗ್ರಾಮಕ್ಕೆ ತೆರಳಲಿದ್ದಾರೆ.ಕ್ರಾಂತಿವೀರ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ರಾಯಣ್ಣನ ಹುಟ್ಟು,ಹೋರಾಟ,ಸಾವು.ಇಡೀ ಜೀವನ ಚರಿತ್ರೆಯನ್ನು ಕಣ್ತುಂಬಿಸುವ ರಾಯಣ್ಣನ ಹೋರಾಟದ ಇತಿಹಾಸದ ಗತವೈಭವ ಬಿಂಬಿಸುವ ರಾಕ್ ಗಾರ್ಡನ್ ಉದ್ಘಾಟಿಸಿದ ಬಳಿಕ ಸಿಎಂ ಸಿದ್ರಾಮಯ್ಯ ರಾಯಣ್ಣನ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ನಂತರ ಸಂಗೊಳ್ಳಿಯಿಂದ ನೇರವಾಗಿ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್ ನಲ್ಲಿ ಇಳಿದು ಬೆಳಗಾವಿಯ ಸಂಕಮ್ ಹೊಟೆಲ್ ನಲ್ಲಿ ಪುಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸಾಂಬ್ರಾ ವಿಮಾನ ನಿಲ್ಧಾಣದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.