Breaking News

ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ- ರಮೇಶ್ ಜಾರಕಿಹೊಳಿ

ಬೆಳಗಾವಿ-ಅಯೋಧ್ಯಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಯಲ್ಲಿ ಈದಿನ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಶ್ರೀರಾಮ ಮಂದಿರ ಉದ್ಘಾಟನೆಯ ನಿಮಿತ್ಯ ಗೋಕಾಕ್ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಮಾಜಿ ಸಚಿವ ಜಾರಕಿಹೊಳಿ.ಉತ್ತರ ಭಾರತದ ರಾಜ್ಯಗಳಲ್ಲಿ ರಜೆ ಘೋಷಣೆ ಮಾಡುತ್ತಾರೆ.ರಾಜ್ಯದಲ್ಲಿಯೂ ರಜೆ ಘೋಷಣೆ ಮಾಡಿ.ಸರ್ಕಾರ ಘೋಷಣೆ ಮಾಡದೇ ಇದ್ರೆ ಸ್ವಯಂ ಪ್ರೇರಿತರಾಗಿ ರಜೆ ಹಾಕಿ ಸಹಕಾರ ಕೊಡಿ.
ಯಾರು ಹೋಗುವರು ಹೋಗ್ಲಿ, ಆದರೆ ಉಳಿದ ವಿದ್ಯಾರ್ಥಿಗಳು ಸಹಕಾರ ಮಾಡಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

Check Also

ಲವ್ ಮ್ಯಾರೇಜ್ ಮಾಡುವಂತೆ ಹಠ ಹಿಡಿದಿದ್ದ ಮಗನ ಮರ್ಡರ್…..!!!

    ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಯಾಕೋ ಏನೋ ಗೊತ್ತಿಲ್ಲ ಲವ್ ಡವ್ ಗಳು ಸಕ್ಸೆಸ್ ಆಗುತ್ತಿಲ್ಲ ಪ್ರೇಮಿಗಳ ಮೇಲೆ …

Leave a Reply

Your email address will not be published. Required fields are marked *