Breaking News
Home / Breaking News / ಬೆಳಗಾವಿ ಜಿಲ್ಲೆಗೆ ತಪ್ಪದ ಮಹಾಮಾರಿ ಕೊರೋನಾ ಕಾಟ…..!

ಬೆಳಗಾವಿ ಜಿಲ್ಲೆಗೆ ತಪ್ಪದ ಮಹಾಮಾರಿ ಕೊರೋನಾ ಕಾಟ…..!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ತಪ್ಪುತ್ತಿಲ್ಲ,ಪ್ರತಿ ದಿನ ಈ ಹೆಮ್ಮಾರಿ ಜಿಲ್ಲೆಯಲ್ಲಿ ಚೆಲ್ಲಾಟ ಮುಂದುವರೆಸಿದೆ.ಶನಿವಾರ ಸಂಜೆ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ ಮತ್ತೋರ್ವ ಯುವತಿಗೆ ಕೊರೊನಾ ಸೊಂಕು ಇರುವದು ದೃಢವಾಗಿದೆ.

ಸಿಂಗಾರಗೊಪ್ಪ ಗ್ರಾಮದ 22 ವರ್ಷದ ಯುವತಿಗೆ ಕೊರೊನಾ ಸೋಂಕು ತಗಲಿದ. ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಹೊಂದಿರುವ ಯುವತಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಗ್ರಾಮದವಳಾಗಿದ್ದಾಳೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ 318ಕ್ಕೇರಿದೆ.ಯುವತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ತಂದೆ, ತಾಯಿ,ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಪಕ್ಕದ ಮನೆಯ ನಾಲ್ವರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 21 ಕೊರೊನಾ ಪಾಸಿಟಿವ್ ಕೇಸ್ ಮಾತ್ರ ಆ್ಯಕ್ಟೀವ್ ಆಗಿದ್ದು ಉಳಿದವರು ಗುಣಮುಖರಾಗಿದ್ದಾರೆ.

About BGAdmin

Check Also

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರ ಕಾರ್ಯಶೈಲಿ ಬದಲಾಗಬೇಕು- ಸತೀಶ್ ಜಾರಕಿಹೊಳಿ

ಬೆಳಗಾವಿ-ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಪಕ್ಷ ಹಲವಾರು ಯೋಜನೆಗಳನ್ನು ರೂಪಿಸಿದೆ,ಪಕ್ಷದ ಪದಾಧಿಕಾರಿಗಳು ಕ್ರೀಯಾಶೀಲವಾಗಬೇಕು,ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರುಗಳ ಕಾರ್ಯಶೈಲಿ ಬದಲಾಗಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ