ಬೆಳಗಾವಿ-ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಬೇಕು ಎನ್ನುವದರ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ಆಗಿದೆ.ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇನ್ನೂ ಟೈಮ್ ಇದೆ.ಇನ್ನೊಂದು ಸುತ್ತಿನ ಚರ್ಚೆ ಮಾಡ್ತೀವಿ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಪಕ್ಕದ ಹುದಲಿಯಲ್ಲಿ ಪೆಟ್ರೋಲ್ ಬಂಕ್ ಉದ್ಘಾಟಿಸಿ .ಮಾದ್ಯಮಗಳ ಜೊತೆ ಮಾತನಾಡಿದ ಅವರು,ಎಲ್ಲವನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.ಚುನಾವಣೆ ಘೋಷಣೆಯಾದ ಬಳಿಕ ಹದಿನೈದು ದಿನ ಟೈಮ್ ಇರುತ್ತೆ,ಈ ತಿಂಗಳ ಕೊನೆಯವರೆಗೂ ನಿರ್ಧಾರ ಮಾಡ್ತೀವಿ,ಬೆಳಗಾವಿ ,ಚಿಕ್ಕೋಡಿ ಅಭ್ಯರ್ಥಿಗಳ ಆಯ್ಕೆ ಎರಡನೇಯ,ಮೂರನೇಯ ಕೊನೆಯ ಹಂತದವರೆಗೂ ಹೋಗಬಹುದು, ಕನಿಷ್ಠ ಹತ್ತು ದಿನಗಳಲ್ಲಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಆಗಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ ಅಭ್ಯರ್ಥಿ ಆಗಬೇಕು ಎನ್ನುವದು ಚರ್ಚೆ ಇದೆ. ಮೊನ್ನೆ ಸಿಎಂ ಡಿಸಿಎಂ ಬೆಳಗಾವಿ ಜಿಲ್ಲೆಗೆ ಬಂದಾಗ ಚಿಕ್ಕೋಡಿ ಮತ್ತು ಬೆಳಗಾವಿ ಏರ್ ಪೋರ್ಟಿನಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು ನಿಜ.ಎಲ್ಲರ ಅಭಿಪ್ರಾಯ ಪಡೆದು ಜಿಲ್ಲೆಯ ನಾಯಕರ ಜೊತೆ ಇನ್ನೊಂದು ಬಾರಿ ಚರ್ಚೆ ಮಾಡಿ ಹೇಳ್ತಿವಿ ಅಂತಾ ಸಿಎಂ ಡಿಸಿಎಂ ಅವರಿಗೆ ಹೇಳಿದ್ದೇವೆ.ಈ ಬಗ್ಗೆ ಅಭ್ಯರ್ಥಿ ಆಗುವವರ ಅಭಿಪ್ರಾಯ ಪಡೆಯಬೇಕು , ನಾನು ನಿಲ್ಲೋದಿಲ್ಲ ಅಂತಾ ಅವರು ಹೇಳಿದ್ರೆ ಕಷ್ಟ, ಆಗುತ್ತೆ ಯಾರು ನಿಲ್ತಾರೆ ಅವರ ಅಭಿಪ್ರಾಯ ಕೂಡಾ ಮುಖ್ಯ ಕಾರ್ಯಕರ್ತರ ಜೊತೆ,ಶಾಸಕರ ಜೊತೆ ಚರ್ಚೆ ಮಾಡಿ ವಾಪಸ್ ಹೇಳ್ತೀವಿ ಅಂತಾ ಸಿಎಂ ಗೆ ಹೇಳಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
ಈ ಸಂಧರ್ಬದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ