Breaking News

ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಗುಡ್ ನ್ಯುಸ್…

ನಾಳೆ ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಾಮಗಾರಿಗೆ ಪ್ರಧಾನಿ ಮೋದಿ ಅವರಿಂದ ಚಾಲನೆ-

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರೂ.357 ಕೋಟಿ ವೆಚ್ಚದಲ್ಲಿ 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಹೊಸ ಟರ್ಮಿನಲ್ ಕಾಮಗಾರಿಗೆ ನಾಳೆ ಮುಂಜಾನೆ 11.40 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚೂವಲ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದ್ದಾರೆ.

ಶನಿವಾರ ಮಾ-09 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಈ ಹೊಸ ಟರ್ಮಿನಲ್‌ನಲ್ಲಿ ನಾಲ್ಕು ಏರೋಬ್ರಿಡ್ಜ್, ತಲಾ 8 ಎಕ್‌ಲೇಟರ್, ಲಿಫ್ಟ್, ಏಕಕಾಲಕ್ಕೆ ಹೊರ ಹೋಗುವ ಮತ್ತು ಒಳ ಬರುವ 2,400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಸ ಟರ್ಮಿನಲ್ ಹೊಂದಲಿದೆ. ಏಕಕಾಲಕ್ಕೆ 9 ವಿಮಾನಗಳ ನಿಲುಗಡೆ ವ್ಯವಸ್ಥೆ, ಟರ್ಮಿನಲ್ ಎದುರಿಗೆ 500 ಕಾರು, 200 ಬೈಕ್ ಇತರೆ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಇದೆ ಎಂದರು.

ಈ ವಿಮಾನ ನಿಲ್ದಾಣ ಅಂತಾರಾಷ್ಟಿçÃಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುತ್ತಿದೆ. ನವದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ಮಹಾನಗರಗಳಿಗೆ ಬೆಳಗಾವಿಯಿಂದ ನೇರವಾಗಿ ವಿಮಾನಯಾನ ಸಂಪರ್ಕ ಇದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ವಿಮಾನ ಸೇವೆ ಸಿಗಲಿದ್ದು, ಇದು ಉತ್ತರ ಕರ್ನಾಟಕ ಜನರಿಗೆ ಅನುಕೂಲ ಆಗಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಸೂರತ್, ನಾಗುರ, ತಿರುಪತಿ, ಜೋಧಪುರ, ಜೈಪುರ ಸೇರಿದಂತೆ 10 ನಗರಗಳಿಗೆ ವಿಮಾನ ಸಂಚಾರವಿದೆ. ಪ್ರತಿ ದಿನ ಸರಾಸರಿ 24 ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಸಂಚಾರ ಕೈಗೊಳ್ಳುತ್ತವೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣದ ಗುತ್ತಿಗೆಯನ್ನು ಕೆಎಂವಿ ಪ್ರಾಜೆಕ್ಟ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಉದ್ದೇಶಿತ ಹೊಸ ಟರ್ಮಿನಲ್ ಏಕಕಾಲಕ್ಕೆ 2400 ಪ್ರಯಾಣಿಕರಿಗೆ ಸ್ಥಳಾವಕಾಶ ಒದಗಿಸಲಿದೆ.

ವಿಮಾನ ನಿಲ್ದಾಣದಲ್ಲಿ ಸದ್ಯ ಟರ್ಮಿನಲ್ 3,600 ಚದರ ಮೀಟರ್ ವಿಸ್ತೀರ್ಣದ್ದಾಗಿದೆ. ಏಕಕಾಲಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೇರೆ ನಗರಗಳಿಗೆ ತೆರಳುವ 320 ಮತ್ತು ಇತರೆ ನಗರಗಳಿಂದ ಬೆಳಗಾವಿಗೆ ಬರುವ 320 ಪ್ರಯಾಣಿಕರು ಸೇರಿ ಒಟ್ಟು 640 ಪ್ರಯಾಣಿಕರಿಗೆ ಟರ್ಮಿನಲ್‌ನಲ್ಲಿ ಸ್ಥಳಾವಕಾಶ ಇರಲಿದೆ ಎಂದು ತಿಳಿಸಿದ್ದಾರೆ.

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.