ಬೆಳಗಾವಿ- ನನಗೂ ಬೆಳಗಾವಿಗೂ 25 ವರ್ಷಗಳ ನಂಟಿದೆ ನಾನು ಅಧಿಕಾರದಲ್ಲಿ ಇದ್ದಾಗ ನಾನು ಬೆಳಗಾವಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ.ಶೆಟ್ಟರ್ ಹಂಗ್ ಮಾಡಿದ್ರು,ಹಿಂಗ್ ಮಾಡಿದ್ರು ಎಂದು ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಲ್ಲಿ ಸತ್ಯಾಂಶ ಇಲ್ಲ.ನಾನು ಬೆಳಗಾವಿಯ ಜನಪ್ರತಿನಿಧಿಯಾಗಿ ಕೆಲಸ ಮಾಡ್ತೀನಿ, ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೆಳಗಾವಿ ಜನತೆಗೆ ಭರವಸೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶೆಟ್ಟರ್ ನಾನು 17 ರಂದು ಮೆರವಣಿಗೆ ಮೂಲಕ ಅಪಾರ ಅಭಿಮಾನಿಗಳ ಜೊತೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ.ಮೆರವಣಿಗೆ ಎಲ್ಲಿಂದ ಶುರುವಾಗುತ್ತೆ ಎನ್ನುವದರ ಬಗ್ಗೆ ನಂತರ ಮಾಹಿತಿ ಕೊಡ್ತೀನಿ.ನಾಮಪತ್ರ ಸಲ್ಲಿಸುವಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಜನ ನಾಯಕರು ಭಾಗವಹಿಸುತ್ತಾರೆ.ಪ್ರಧಾನಿ ನರೇಂದ್ರ ಮೋದಿ, ಯೋಗಿ ಆಧಿತ್ಯನಾಥ,ಮತ್ತು ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಬೆಳಗಾವಿಗೆ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಬಸನಗೌಡ ಪಾಟೀಲ ಯತ್ನಾಳ ಅವರನ್ನೂ ಸಂಪರ್ಕಿಸಿದ್ದೇನೆ ಅವರೂ ಬೆಳಗಾವಿಗೆ ಬರಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದೇಶದ ಸಭದ್ರತೆಯ ವಿಚಾರವೇ ದೇಶದ ಮುಂದಿನ ಪ್ರಧಾನಿ ಯಾರಾಗಬೇಕು, ಎನ್ನುವ ವಿಚಾರಧಾರೆಯ ಮೇಲೆ ಚುನಾವಣೆ ನಡೆಯುತ್ತಿದೆ.ಈ ಚುನಾವಣೆಯಲ್ಲಿ ಜಾತಿ ಪ್ರಭಾವ ನಡೆಯೋದಿಲ್ಲ ಜಾತಿಯನ್ನು ಮೀರಿ ದೇಶದ ಭದ್ರತೆಯ ವಿಚಾರದ ಮೇಲೆ ಇಲೆಕ್ಷನ್ ನಡೆಯುತ್ತದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ರು.