Breaking News

ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯ ಹುಚ್ಚಾಟ..ಪ್ರೇಮಿ ವೈಲೆಂಟ್…ಪೋಲಿಸ್ರು ಸೈಲೆಂಟ್..!!

ಬೆಳಗಾವಿ- ನೋಡಲು ಧಾಡಸಿ,ಈತನ ಹೆಸರು ತಿಪ್ಪಣ್ಣ, ಈತನ ಹುಚ್ಚಾಟ ನೋಡಿದ್ರೆ ನಗಬೇಕೋ..ಅಳಬೇಕೋ ಗೊತ್ತಾಗುತ್ತಿಲ್ಲ,ಊರಲ್ಲಿ ಇರುವ ಅಸಹಾಯಕ ಹುಡಗಿಯ ಹಿಂದೆ ಬಿದ್ದಿದ್ದಾನೆ.ನನ್ನ ಮದುವೆ ಆಗಬೇಕು ಅಂತಾ ಆ ಹುಡುಗಿಗೆ ಪೀಡಿಸುತ್ತಿದ್ದಾನೆ.ನಿನ್ನೆ ಈ ತಪ್ಪಣ್ಣ ಹುಡಗಿಯ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಹಾರಾಡಿದ್ರು ಈತನಿಗೆ ಲಗಾಮು ಹಾಕುವದರಲ್ಲಿ ಲೋಕಲ್ ಪೋಲಿಸ್ರು ಫೇಲ್ ಆಗಿದ್ದಾರೆ.

ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಕೊಲೆ ಪ್ರಕರಣದ ನಂತರವೂ ಪಾಗಲ್ ಪ್ರೇ(ಕ್ರಿ)ಮಿಗಳ ಕಾಟ! ತಣ್ಣಗಾಗಿಲ್ಲ.ಬೆಳಗಾವಿಯಲ್ಲಿ ಇದ್ದಾನೊಬ್ಬ ಸೈಕೋಪಾತ್ ಪಾಗಲ್ ಪ್ರೇಮಿ ಆತನ ಹುಚ್ಚಾಟಕ್ಕೆ ಆ ಹುಡಗಿ ಅಷ್ಟೇ ಅಲ್ಲ,ಗ್ರಾಮಸ್ಥರೂ ಹೈರಾನಾಗಿದ್ದಾರೆ.ಪಾಗಲ್ ಪ್ರೇಮಿ ಅಟ್ಟಹಾಸಕ್ಕೆ ಹುಡಗಿಯ ಕುಟುಂಬವೂ ಹೈರಾಣಾಗಿದೆ.

ಬೆಳಗಾವಿ ತಾಲೂಕಿನ ‌ಕಿಣೆಯ ಗ್ರಾಮದಲ್ಲಿ ಈ ಘಟನೆ ಈಗ ಕೆಲವರಿಗೆ ಮನರಂಜನೆಯಾದ್ರೆ ಕೆಲವರಿಗೆ ತಲೆನೋವಾಗಿದ್ದು ನಿಜ ಗ್ರಾಮದಲ್ಲಿ ಇಷ್ಟೆಲ್ಲಾ ನಡೆದ್ರೂ ಪೋಲೀಸರೂ ಸಹ ಪ್ರೇಕ್ಷರಾಗಿದ್ದಾರೆ.ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ ಈ ಪಾಗಲ್ ಕ್ರಿಮಿ….

ಹುಬ್ಬಳ್ಳಿ ಮೂಲದ ನೇಹಾಳಂತೆ ಕೊಲೆ ಮಾಡ್ತೀನಿ, ಎಂದು ಆ ಹುಡುಗಿಗೆ ಧಮಕಿ ಹಾಕಿದ್ದಾನೆ.ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಪೀಡಿಸುತ್ತಿರುವ ಪಾಗಲ್ ಪ್ರೇಮಿಯ ಹುಚ್ಚಾಟ ಈಗ ಹುಡಗಿಯ ಮನೆ ಮೇಲೆ ಕಲ್ಲು ತೂರುವ ಹಂತಕ್ಕೆ ಹೋಗಿದೆ.ಬೆಳಗಾವಿ ತಾಲೂಕಿನ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬಾತನೇ ಪಾಗಲ್ ಪ್ರೇಮಿ.ಅದೇ ಗ್ರಾಮದ ಬಿಕಾಂ ಓದುತ್ತಿರುವ ಯುವತಿ ಬೆನ್ನು ಬಿದ್ದು, ಪೀಡಿಸುತ್ತಿರುವ ತಿಪ್ಪಣ್ಣ ಕಾಟದಿಂದ ಯುವತಿ ನಿತ್ಯ ತೊಂದರೆ ಅನುಭವಿಸುತ್ತಿದ್ದಾಳೆ.

ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ಯುವತಿಗೆ ಕಿರುಕುಳ ಕೊಡೋದು,ತಿಪ್ಪಣ್ಣ ಡೋಕರೆ ಹುಚ್ಚಾಟಕ್ಕೆ ಬೇಸತ್ತು ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಾಳೆ.ಕಿಣೆಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿರುವ 21ವರ್ಷದ ಯುವತಿ ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಮನೆ ಬಿಟ್ಟು ಹೊರಗೆ ಬಾರದಂತಹ ಪರಿಸ್ಥಿತಿ ಎದುರಾಗಿದೆ.

ಯುವತಿ ಜೊತೆಗೆ ಮದುವೆ ಮಾಡಿ ಕೊಡುವಂತೆ ತಾಯಿಗೂ ತಿಪ್ಪಣ್ಣ ಧಮ್ಕಿ ಹಾಕಿದ್ದಾನೆ.ಮದುವೆ ಮಾಡಿ ಕೊಡದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.ಕೆಲೆ ತಿಂಗಳ ಹಿಂದೆಯೇ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನಂತೆ,ಈ ಪಾಗಲ್ ಪ್ರೇಮಿ,ಇದಾದಬಳಿಕ ಮೂರ ದಿನಗಳ ಹಿಂದೆಯೂ ಮನೆಗೆ ಬಂದೂ ಗಲಾಟೆ ಮಾಡಿದ್ದಾನಂತೆ ಪಾಗಲ್ ತಪ್ಪಣ್ಣ,ಮನೆಯಲ್ಲಿ ಯಾರು ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ನಡೆಸಿದ್ದಾನೆ.ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ಕೊಡುತ್ತಲೇ ಇದ್ದಾನೆ.

ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಪೊಲೀಸರ ಮೊರೆ ಹೋಗಿರುವ ಕುಟುಂಬ ಆದ್ರೆ ಪೋಲೀಸರು ಈವರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.ಆಗ ಪೊಲೀಸರ ವಾರ್ನ್‌ಗೆ ಕೆಲ ದಿನಗಳ ಕಾಲ ಯುವತಿ ತಂಟೆಗೆ ಹೋಗದೇ ತಪ್ಪಣ್ಣ ಸೈಲೆಂಟ್ ಆಗಿದ್ದ, ಈಗ ಮತ್ತೆ ವೈಲೆಂಟ್ ಆಗಿದ್ದಾನೆ.ಎರಡು ಬಾರಿಯೂ ನಾಳೆ ಬನ್ನಿ ಎಂದು ಹೇಳಿ ಕಳಿಸಿರುವ ಪೊಲೀಸರು ಮೌನವಾಗಿದ್ದಾರೆ.ಪೊಲೀಸರ ನಿರ್ಲಕ್ಷ್ಯಕ್ಕೆ ಜೀವಭಯದಲ್ಲೇ ಜೀವನ ನಡೆಸುತ್ತಿರುವ ಯುವತಿ ಹಾಗೂ ಆಕೆಯ ತಾಯಿ

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *