ಬೆಳಗಾವಿ – ಇಬ್ಬರ ಲಗ್ನ ನಿಶ್ಚಯವಾಗಿತ್ತು ಆದ್ರೆ ಮದುವೆಯಾಗುವ ಹುಡುಗಿಗೆ ಸಂಕಷ್ಟ ಎದುರಾಗಿತ್ತು ನೋವು ಅಂತಾ ವೈದ್ಯರ ಬಳಿ ಹೋದಾಗ ತಪಾಸಣೆಯಲ್ಲಿ ಕ್ಯಾನ್ಸರ್ ರೋಗ ಪ್ರತ್ಯಕ್ಷವಾಗಿತ್ತು ಮನನೊಂದು ಆ ಹುಡಗಿ ಆತ್ಮಹತ್ಯೆ ಮಾಡಿಕೊಂಡಳು ಈ ಸುದ್ಧಿ ತಿಳಿದು ಶಾಕ್ ಆದ ಹುಡುಗನೂ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಮಹಾನಗರದಲ್ಲಿ ನಡೆದಿದೆ.
ಬಟ್ಟೆ ವ್ಯಾಪಾರಕ್ಕಾಗಿ ದೂರದ ಉತ್ತರ ಪ್ರದೇಶ ಫತೇಪೂರದಿಂದ ಬೆಳಗಾವಿಯಲ್ಲಿ ನೆಲೆಸಿದ್ದ 27 ವರ್ಷದ ಆವೇಶ್ ಜುಬೇರ ಪಠಾಣ ಇಂದು ಬೆಳಗಾವಿಯ ಚಿರಾಗ್ ನಗರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಫತೇಪೂರದಲ್ಲಿ ಮದುವೆಯಾಗಬೇಕಿದ್ದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಹೈರಾಣಾಗಿದ್ದ ಹುಡುಗ ಇತ್ತ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಬೆಳಗಾವಿಯ ಖಡೇಬಝಾರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ