Breaking News

ಗಂಡ ಕೈಕೊಟ್ಟ.,ಗಂಡನ ಮಾವ, ಲೈಂಗಿಕ ಕಿರುಕುಳ, ಕೊಟ್ಡ, ಎಂದು ಆತ್ಮಹತ್ಯೆಗೆ ಯತ್ನ…

ಬೆಳಗಾವಿ- ನಾನು BE ಇಂಜಿನಿಯರಿಂಗ್ ವರ್ಷಕ್ಕೆ 15 ಲಕ್ಷ ಪ್ಯಾಕೇಜ್ ,( ಪಗಾರ) ಎಂದು ಸುಳ್ಳು ಹೇಳಿ,ಯುವತಿಯನ್ನು ನಂಬಿಸಿದ ಮದುವೆಯಾದ ಬೆಳಗಾವಿಯ ಪೋರ ಈಗ ಮದುವೆ ಮಾಡಿಕೊಂಡ ಯುವತಿಗೆ ವರದಕ್ಷಣೆ ಕೊಡುವಂತೆ ಕಿರುಕಳ ಕೊಡುತ್ತಿದ್ದು, ಗಂಡನ ಮಾವ ಲೈಂಗಿಕ ಕಿರುಕಳ ಕೊಡುತ್ತಿದ್ದಾನೆ ಎಂದು ಆರೋಪಿಸಿರುವ ಬೆಳಗಾವಿಯ ವಿವಾಹಿತ ಯುವತಿ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 20 ವರ್ಷದ ವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.ಕಳೆದ 18 ಅಕ್ಟೋಬರ್ 2022ರಂದು ಗಣೇಶ ಗುಡ್ಯಾಳಕರ ಜೊತೆಗೆ ಕನವಿಕಾ ಎಂಬಾಕೆಯನ್ನು ಮದುವೆ ಮಾಡಿಕೊಂಡಿದ್ದ. ನಾನು ಬಿಇ ಪದವೀಧರ ಎಂಜಿನಿಯರ್ ಕೆಲಸ ಮಾಡುತ್ತೇನೆ ಎಂದು ನಂಬಿಸಿ ಮೋಸದಿಂದ ನನಗೆ ಮದುವೆಯಾದ ಇಲ್ಲಿನ ಗಣೇಪುರದ ನಿವಾಸಿ ಗಣೇಶಗೆ ಮದುವೆ ವೇಳೆ ನಾಲ್ಕು ತೊಲೆ ಬಂಗಾರದ ಬಳೆ, ಐದು ತೊಲೆ ನಕಲೇಸ್ ಹಾಗೂ ನಾಲ್ಕು ತೊಲೆ ಮಂಗಳಸೂತ್ರ ಹಾಗೂ ಕಿವಿ ಓಲೆಗಳನ್ನು ನೀಡಿದ್ದರು. ಅದನ್ನು ಎಲ್ಲ ಕಸೆದುಕೊಂಡಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಕನವಿಕಾ ಸುದ್ದಿಗಾರರ ಎದುರು ನೋವು ತೋಡಿಕೊಂಡಳು.

ಮದುವೆಯಾದ ಬಳಿಕ ಸಂಸಾರ ಮಾಡಲು ಗಂಡನ ಮನೆಗೆ ಹೋದಾಗ ಆರು ತಿಂಗಳುಗಳ ಕಾಲ ಚೆನ್ನಾಗಿಯೇ ನೋಡಿಕೊಂಡಿದ್ದರು. ನಂತರ ಗಂಡನ ಮನೆಯವರು ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುವುದು, ಹೊಡೆಯುವುದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಲ್ಲದೆ, ತವರು ಮನೆಯಿಂದ ಹಣ ತರುವಂತೆ ಸತಾಯಿಸುತ್ತಿದ್ದರು ಎಂದು ದೂರಿದಳು.
ನನ್ನ ಗಂಡನ ಮನೆಯಲ್ಲಿ ಅವರ ತಂದೆ ತಮ್ಮಣ ತಾಯಿ ಸುಜಾತಾ, ಅವನ ಅಕ್ಕ ಸೌಮ್ಯ ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದರು. ಐದು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಸತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ.

ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಗಂಡ ಮದ್ಯವ್ಯಸನಿಯಾಗಿದ್ದ ಆತನಿಗೆ ನಾನು ಏಳು ಲಕ್ಷ ರೂ. ಹಣ ನೀಡಿದ್ದೇನೆ. ಈಗ ಗಂಡನ ಮನೆಯವರು ಈಗ ಮನೆ ಬಿಟ್ಟು ಹೊರಗೆ ಹಾಕಿದ್ದಾರೆ. ನನಗೆ ‌ನ್ಯಾಯ ಕೊಡಿಸಬೇಕೆಂದು ಯುವತಿ ಮಾದ್ಯಮಗಳ ಎದುರು ಕಣ್ಣೀರು ಹಾಕಿದ್ದಾಳೆ.

ನನಗೆ ನ್ಯಾಯ ಸಿಗದಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಈ ಅಸಹಾಯಕ ಯುವತಿ ಅಸಮಾಧಾನ ವ್ಯಕ್ತ ಪಡಿಸಿದ್ದಾಳೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *