ಬೆಳಗಾವಿ- ಬೆಳಗಾವಿ ಮಹಾನಗರದ ಮಾರ್ಕೆಟ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಮಾಡಿ,ಈ ಮನೆಯಲ್ಲಿ ಕಂಪ್ಯುಟರ್, ಲ್ಯಾಪಟಾಪ್ ಪ್ರೀಂಟರ್ ಇಟ್ಕೊಂಡು ನೀಟ್ ಪರೀಕ್ಷೆಯಲ್ಲಿ ಲಫಡಾ ಮಾಡುತ್ತಿದ್ದ ಖದೀದ ಅರವಿಂದ್ ಅಳಗೊಂಡ್ ಎಂಬಾತ ಕೊನೆಗೂ ಬೆಳಗಾವಿ ಪೋಲೀಸರ ಕೈಗೆ ಸಿಕ್ಕೊಂಡಿದ್ದಾನೆ.
ಸರ್ಕಾರಿ ಕೋಟಾದಡಿ ಸೀಟ್ ಕೊಡಿಸುತ್ತೇನೆ ಅಂತ ಪಂಗನಾಮ ಹಾಕಿದ್ದ, ವಂಚಕ ಕೊನೆಗೂ ಅರೆಸ್ಟ್ ಆಗಿದ್ದಾನೆ.ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿದ್ದ ವಂಚಕ,ಆರೋಪಿ ಅರವಿಂದ್ ಅರಗೊಂಡ ಎಂಬಾತನನ್ನ ಬಂಧಿಸಿದ ಮಾರ್ಕೆಟ್ ಠಾಣೆ ಪೊಲೀಸರು ವಂಚನೆಯ ಜಾಲವನ್ನು ಪತ್ತೆ ಮಾಡಿದ್ದಾರೆ.
ಬೆಳಗಾವಿಯ ಕೊಲ್ಲಾಪುರ ಸರ್ಕಲ್ ನಲ್ಲಿ ಆಫೀಸ್ ಮಾಡಿಕೊಂಡಿದ್ದ ಆರೋಪಿ,ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೇ ಈತನ ಟಾರ್ಗೆಟ್ ಆಗಿದ್ದರು.ಬೆಳಗಾವಿಯಲ್ಲಿ ಸುಮಾರು 10 ಜನರಿಂದ 1 ಕೋಟಿ 8 ಲಕ್ಷ ಹಣ ವಂಚಿಸಿದ್ದಾನೆ.
ಬೆಳಗಾವಿಯಲ್ಲಿ ಸಾಲದ್ದಕ್ಕೆ ಮುಂಬೈನಲ್ಲೂ ಬ್ರಾಂಚ್ ಓಪನ್ ಮಾಡಿದ್ದ ಖದೀಮ.ನೀಟ್ ಪರೀಕ್ಷೆ ಬರೆದು ಕಡಿಮೆ ಅಂಕ ಪಡೆದವರನ್ನೆ ಟಾರ್ಗೆಟ್ ಮಾಡ್ತಿದ್ದ.
ವಂಚಕ ಅರವಿಂದನ ಡ್ರೈವರ್ ಮೊಬೈಲ್ ಟ್ರೇಸ್ ಮಾಡಿದ್ದ ಪೊಲೀಸರು,ವಂಚಕನ ಡ್ರೈವರ್ ಟ್ರೇಸ್ ಮಾಡಿ ವಂಚಕ ಅರವಿಂದ್ ನನ್ನು ಅರೆಸ್ಟ್ ಮಾಡಿದ್ದಾರೆ.
ಸಧ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅರವಿಂದ ಅರಗೊಂಡ,ಖದೀಮನಿಂದ 12 ಲಕ್ಷ ಹಣ ಸೇರಿದಂತೆ ವಂಚನೆಗೆ ಬಳಿಸಿದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಣವೂ ಸೇರಿ ಒಟ್ಟು 12,66900 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು,ಬೆಳಗಾವಿಯ ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.