ಬೆಳಗಾವಿ- ಬೆಳಗಾವಿ ನಗರದ ನಾಲೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿರುವ ಘಟನೆ ನಡೆದಿದೆ.ಬೆಳಗಾವಿಯ ಉಜ್ವಲ ನಗರದಲ್ಲಿ ಹರಿಯುತ್ತಿರುವ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿದೆ, ನಾಲೆಯಲ್ಲಿ ಜೋತು ಬಿದ್ದಿರುವ ಮರದ ಟೊಂಗೆಯಲ್ಲಿ ಈ ಶವ ಸಿಲುಕಿದ್ದರಿಂದ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.
ಬೆಳಗಾವಿ ಮಾಳಮಾರುತಿ ಪೋಲೀಸ್ ಠಾಣೆಯ ಪೋಲೀಸರು ದೌಡಾಯಿಸಿದ್ದು ಅಪರಿಚಿತ ಶವವನ್ನು ಹೊರತೆಗೆದು ತನಿಖೆ ಮುಂದುವರೆಸಿದ್ದಾರೆ.
ವಿಪರೀತ ಮಳೆಯ ಕಾರಣ ನಾಲೆಯ ಪ್ರವಾಹಕ್ಕೆ ಶವ ತೇಲಿ ಬಂದಿದೆ. ಸುಮಾರು 33 ರಿಂದ 35 ವರ್ಷ ವಯಸ್ಸಿನ ಹಳದಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು ಕೈ ಮೇಲೆ ಲಕ್ಷ್ಮಣ.H ಎಂದು ಬರೆದ ಟ್ಯಾಟು ಇದೆ. ಮೃತ ವ್ಯಕ್ತಿಯು ಧರಿಸಿದ ಹಳದಿ ಶರ್ಟ್ ನೇಲೆ ವೀರಭದ್ರ ನಗರದ ಟೇಲರ್ ನೊಬ್ಬನ ಬ್ಯಾಚ್ ಇದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ