ಸತೀಶ್‌ ಶುಗರ್ಸ್ ಗೆ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಅವಾರ್ಡ್…

ಬೆಳಗಾವಿ: ಸತೀಶ್‌ ಶುಗರ್ಸ್ ಲಿಮಿಟೆಡ್, ಹುಣಶ್ಯಾಳ ಪಿ.ಜಿ. ಸಕ್ಕರೆ ಕಾರ್ಖಾನೆಗೆ 2024 ನೇ ಸಾಲಿನ “ಅತ್ಯುತ್ತಮ ಸಕ್ಕರೆ ಕಾರ್ಖಾನೆ ಪ್ರಶಸ್ತಿ” ಯನ್ನು ದಿ. ಡೆಕ್ಕನ್ ಶುಗರ್ ಟೆಕ್ನೋಲೊಜಿಸ್ಟ್ ಅಸೋಸಿಯೇಶನ್ ನೀಡಿ ಗೌರವಿಸಿದೆ.

ಕಾರ್ಖಾನೆಯ ಸಕ್ಕರೆ ಘಟಕ, ಸಹ-ವಿದ್ಯುತ್ ಮತ್ತು ಡಿಸ್ಟಿಲರಿ ಘಟಕಗಳ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮಥ್ರ್ಯದ ಬಳಕೆ, ದಕ್ಷತೆ ಮತ್ತು ಕಾರ್ಯಕ್ಷಮತೆ ಪರಿಗಣಿಸಿ ಪುಣೆಯ ದಿ. ಡೆಕ್ಕನ್ ಶುಗರ್ ಟೆಕ್ನೋಲೊಜಿಸ್ಟ್ ಅಸೋಸಿಯೇಶನ್ ಸಂಸ್ಥೆಯು ಆ. 24 ರಂದು ಪುಣೆಯಲ್ಲಿ ನಡೆದ ತಮ್ಮ ಸಂಸ್ಥೆಯ 69ನೇ ವಾರ್ಷಿಕ ಸಮಾವೇಶದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ. ಎಸ್. ಬಿ. ಭಡ ಹಾಗೂ ಆಮಂತ್ರಿತ ಇನ್ನಿತರ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಕಂದಾಯ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ದಿ ಸಚಿವ ಡಾ. ರಾಧಾಕೃಷ್ಣ ವಿಖೆ ಪಾಟೀಲ್ ಇವರಿಂದ ಸತೀಶ್‌ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಕುರಿತು ಮಾತನಾಡಿದ ಸತೀಶ್‌ ಶುಗರ್ಸ್ ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ, ಸಂಸ್ಥಾಪಕ ಅಧ್ಯಕ್ಷ, ಸಚಿವ ಸತೀಶ್‌ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಕಾರ, ಅಧಿಕಾರಿಗಳ ಮತ್ತು ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಕಾರ್ಖಾನೆಯು ಈ ಪ್ರಶಸ್ತಿ ಪಡೆಯಲು ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.

ಈ ಸಾಧನೆಯಲ್ಲಿ ಕಾರ್ಖಾನೆಯ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಶ್ರದ್ದೆ ಮತ್ತು ಶ್ರಮವು ಶ್ಲಾಘನೀಯವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ, ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೂ, ಆಧಿಕಾರಿ ವರ್ಗದವರಿಗೂ, ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ವ ಕಾರ್ಮಿಕ ವರ್ಗದವರಿಗೂ ಮತ್ತು ರೈತ ಭಾಂದವರಿಗೂ, ಹಣಕಾಸು ಸಂಸ್ಥೆಗಳಿಗೂ, ಗ್ರಾಹಕರಿಗೂ ಮತ್ತು ಕಾರ್ಖಾನೆಯ ಎಲ್ಲ ಶ್ರೇಯೋಭಿಲಾಷಿಗಳಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದರಂತೆ, ಮುಂದಿನ ದಿನಗಳಲ್ಲಿಯೂ ಸಹ ಎಲ್ಲ ರೈತ ಭಾಂದವರು, ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಕಬ್ಬು ತೋಡ್ನಿ ಮತ್ತು ಸಾರಿಗೆ ಮಕ್ತೆದಾರರು ಇನ್ನೂ ಹೆಚ್ಚಿನ ಸಹಕಾರವನ್ನು ನೀಡಿ ಸಂಸ್ಥೆಯ ಪ್ರಗತಿಗೆ ಶ್ರಮಿಸುವಿರೆಂದು ಆಶಿಸಬೇಕೆಂದು ವಿನಂತಿಸಿದ್ದಾರೆ.

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.