ಬೆಳಗಾವಿಯ ವಿಮಾನ ಹಾರಾಟಗಳನ್ನು ಬಂದ್ ಮಾಡಿಸಿ ಹುಬ್ಬಳ್ಳಿಗೆ ಹಾರಿಸುವುದು, ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಲು ಟೆಕ್ನಿಕಲ್ ಪ್ರಾಬ್ಲಂ ಇದೆ ಎಂದು ರೈಲು ಅಧಿಕಾರಿಗಳಿಂದ ಹೇಳಿಕೆ ಕೊಡಿಸಿ ಬೆಳಗಾವಿಗೆ ಮೋಸ ಮಾಡುವ ಪ್ರಯತ್ನಗಳು ನಿಂತಿಲ್ಲ.ಟೆಕ್ನಿಕಲ್ ಪ್ರಾಬ್ಲಂ ಇದೇ ಎಂದು ಹೇಳಿರುವ ಮಾರ್ಗದಲ್ಲೇ ಪೂಣೆ – ಹುಬ್ಬಳ್ಳಿ ವಂದೇ ಭಾರತ್ ರೈಲು ಸಂಚರಿಸಲು ರೆಡಿಯಾಗಿದೆ.ಅದಕ್ಕೆ ಟೆಕ್ನಿಕಲ್ ಪ್ರಾಬ್ಲಂ ಇಲ್ಲ. ಬೆಳಗಾವಿಯ ಸಂಸದರು ಈ ಬಗ್ಗೆ ಬೆಳಗಾವಿ ಜನರಿಗೆ ಉತ್ತರ ಕೊಡಬೇಕಾಗಿದೆ. ರೈಲು ಸಂಚಾರ ಮತ್ತು ವಿಮಾನಯಾನದ ವಿಚಾರದಲ್ಲಿ ಬೆಳಗಾವಿಗೆ ಪದೇ ಪದೇ ಅನ್ಯಾಯ ಆಗುತ್ತಲೇ ಇದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹಾಗೂ ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಹಾಗೂ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಳಗಾವಿಗೆ ನ್ಯಾಯ ದೊರಕಿಸಿ ಕೊಡಬಹುದೇ.? ಇದು ನಿಮ್ಮ ನೆಲದ ಪ್ರಶ್ನೆ ಇದನ್ನು ನೀವೇ ಕೇಳಿದ್ರೆ ನ್ಯಾಯ ಸಿಗಬಹುದು.
ಹುಬ್ಬಳ್ಳಿಗೆ ಒಂದಲ್ಲ ಎರಡು ವಂದೇ ಭಾರತ್
ಬೆಂಗಳೂರು: ಹುಬ್ಬಳ್ಳಿ- ಪುಣೆ ನಗರಗಳ ನಡುವೆ ಹುಬ್ಬಳ್ಳಿಯಿಂದ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಸಚಿವ ಪ್ರಹ್ಲಾದ್ ಜೋಷಿ, ‘ಹುಬ್ಬಳ್ಳಿ-ಧಾರವಾಡದ ಜನರೊಂದಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿಹಿ ಸುದ್ದಿ.. ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ಹುಬ್ಬಳ್ಳಿಯ ಎರಡನೇಯ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ‘ಈ ಕುರಿತು ಸನ್ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಲ್ಲಿ ನಾನು ಜುಲೈನಲ್ಲಿ ಪತ್ರದ ಮುಖಾಂತರ ವಿನಂತಿಸಿಕೊಂಡಿದ್ದೆ. ಹುಬ್ಬಳ್ಳಿ ಪುಣೆ ಸಂಪರ್ಕದಿಂದ ಈ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಾಹತುಗಳಿಗೆ ತುಂಬಾ ಅನುಕೂಲವಾಗುವುದು ಮತ್ತು ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಅತ್ಯಂತ ಪ್ರಮುಖವಾಗುವುದೆಂಬುದನ್ನು ಮಂತ್ರಿಗಳ ಗಮನಕ್ಕೆ ತರಲಾಗಿತ್ತು.ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪುಣೆ- ಹುಬ್ಬಳ್ಳಿ ವಂದೇ ಭಾರತ್ ರೈಲು ಬೆಳಗಾವಿ ಮಾರ್ಗವಾಗಿಯೇ ಸಂಚರಿಸಲಿದೆ ಇದಕ್ಕೆ ಟಿಕ್ನಿಕಲ್ ಪ್ರಾಬ್ಲಂ ಇಲ್ಲ ಹುಬ್ಬಳ್ಳಿಯ ಪಾಲಿಟೀಕ್ಸ್ ಪ್ರೆಶರ್ ಇದೆ. ಹೀಗಾಗಿ ಟೆಕ್ನಿಕಲ್ ಪ್ರಾಬ್ಲಂ ಇರುವ ಮಾರ್ಗದಲ್ಲೇ ವಂದೇ ಭಾರತ ಸರಳವಾಗಿ ಚಲಿಸಲಿದೆ.