Breaking News

ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ವಲು ಹೇಳ್ತಾರೆ ಹುಷಾರ್……!!!

ಬೆಳಗಾವಿ: ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ ಎಂದು ವಿಡಿಯೋ ಕಾಲ್​ ಮಾಡಿ, ಮಹಿಳೆಯರ ನಗ್ನ ದೇಹವನ್ನು ರೆಕಾರ್ಡ್​ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್(ಸಿಇಎನ್) ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಕಾಲ್ ಮಾಡಿ ನೀವು ಕ್ರೈಮ್ ನಲ್ಲಿ ಭಾಗಿಯಾಗಿದ್ದಿರಿ ಅಂತಾ ಹೆದರಿಸುವ ಖದೀಮರು,
ವಿಡಿಯೋ ಕಾಲ್ ಮೂಲಕ ಮಾಹಿತಿ ಕೇಳುತ್ತಾರೆ. ಬಳಿಕ ನಿಮ್ಮ ಇಡೀ ದೇಹವನ್ನು ತಪಾಸಣೆ ಮಾಡಬೇಕು ಅಂತಾ ಬೆತ್ತಲೆಗೊಳಿಸುತ್ತಾರೆ. ಇದನ್ನೇ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಬೆಚ್ಚಿ ಬೀಳಿಸುವ ಸಂಗತಿ ಬೆಳಗಾವಿ ಪೊಲೀಸರನ್ನೆ ಬೆಚ್ಚಿ ಬೀಳಿಸಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೊಸ ಮಾದರಿಯಲ್ಲಿ ಸೈಬರ್ ಕ್ರೈಮ್ ಮಾಡುತ್ತಿದ್ದಾರೆ. ಮೇಲ್, ಮೆಸೇಜ್, ಕಾಲ್ಸ್ ಅಥವಾ ವಾಟ್ಸಪ್ ಮೂಲಕ ಒಂದು ಮೆಸೇಜ್ ಬರುತ್ತದೆ. ಕ್ರೈಮ್ ಬ್ರ್ಯಾಂಚ್ ದಿಂದ ಕರೆ ಮಾಡುತ್ತಿದ್ದೇವೆ.
ನಿಮ್ಮ ಹೆಸರು ಕ್ರಿಮಿನಲ್ ಕೇಸ್ ನಲ್ಲಿ ಬಂದಿದೆ.
ನೀವು ನಮ್ಮ ಹತ್ತಿರ ಬರಬೇಕು ರಿಪೋರ್ಟ್ ಕೊಡಬೇಕು ಯಾಕೆ ನೀವು ಈ ರೀತಿ ಮಾಡಿದೀರಿ. ಈ ರೀತಿ ಮಾಡಿ ಸಂತ್ರಸ್ಥರಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂದು ವಿವರಿಸಿದರು.

ಈಗ ನಾವು ನಿಮ್ಮನ್ನು ವಿಚಾರಣೆ ಮಾಡಬೇಕು ಕ್ಯಾಮರಾ ಮುಂದೆ ನೀವು ಬರಬೇಕು. ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಮ್ ಬಗ್ಗೆ ಫ್ಯಾಮಿಲಿ ಅವರಿಗೆ ಹೇಳುತ್ತೇವೆ. ಹೇಗೆ ಕ್ರೈಮ್ ಮಾಡಿದೀರಿ ಅಂತಾ ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು ಬಟ್ಟೆ ಬಿಚ್ಚಬೇಕು ಅಂತಾ ಹೇಳುತ್ತಾರೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ನಂಬಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ. ಈ ರೀತಿ ಕರೆಗಳು ಬಂದು ಬ್ಲ್ಯಾಕ್ ಮೇಲ್ ಮಾಡಿದರೆ ಕೂಡಲೇ ಪೊಲೀಸರ ಗಮನಕ್ಕೆ ತರುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ.

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *