ಬೆಳಗಾವಿ – ಬೆಳಗಾವಿ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿ ನಿನ್ನೆ ಸಂಜೆ ಏನಾಗಿದೆ. ಹುಲಿನೋ ಸಿಂಹನೋ ತಪ್ಪಿಸಿಕೊಂಡಿತ್ತು ಎಂಬ ವದಂತಿಗಳು ಹರಿದಾಡಿತ್ತಿವೆ. ವದಂತಿಗೆ ಪುಷ್ಟಿ ಕೊಡುವಂತೆ ನಿನ್ನೆ ಮಧ್ಯಾಹ್ನದ ಬಳಿಕ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಈ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಸಿಂಹವನ್ನು ಒಂದು ಬೋನ್ ನಿಂದ ಇನ್ನೊಂದು ಬೋನ್ ಗೆ ಶಿಫ್ಟ್ ಮಾಡೊವಾಗ ತಪ್ಪಿಸಿಕೊಂಡಿತ್ತು ಎಂಬ ವದಂತಿ ಇದೆ. ಸಿಂಹ ಮೂರು ಕಿ ಮೀ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ. ಆದರೇ ಯಾಕೆ ವಿಷಯವನ್ನು ಮುಚ್ಚಿಡಲಾಗುತ್ತಿದೆ ಎಂಬುದು ಪ್ರಶ್ನಾರ್ಥಕವಾಗಿದೆ.
ಕಾಡು ಪ್ರಾಣಿಗಳ ನಿಗಾ ವಹಿಸುವ ವಿಚಾರದಲ್ಲಿ ಅಧಿಕಾರಿಗಳು ಯಡವಟ್ಟು ಮಾಡಿದ್ರಾ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ನಿನ್ನೆ ಝೂ ನಲ್ಲಿ ಏನಾಗಿತ್ತು ಎಂಬುದನ್ನು ಅಧಿಕಾರಗಳೇ ಹೇಳಬೇಕಿದೆ.
ಹುಲಿ ಅಥವಾ ಸಿಂಹ ಮಿಸ್ ಆಗಿದ್ದರಿಂದ ನಿನ್ನೆ ಅದು ಕ್ಯಾಚ್ ಆಗೋವರೆಗೂ ಮೃಗಾಲಯ ಬಂದ್ ಮಾಡಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.