ಬೆಳಗಾವಿ- ಮಾತಿಗೆ ಮಾತು ಬೆಳೆದು ಜಗಳ ಶುರು ಆದ್ರೆ ಸಾಕು ಬೆಳಗಾವಿ ಹುಡುಗರು ಚಾಕು ಚೂರಿ,ತಲವಾರ್ ತೆಗೆದು ಚುಚ್ಚಾಟ ನಡೆಸಿದ್ದಾರೆ,ಈ ಚುಚ್ಚಾಟ ಈಗ ಬೆಳಗಾವಿಯಲ್ಲಿ ಸಾಮಾನ್ಯವಾಗಿದೆ, ಹುಡುಗರ ಈ ಹುಚ್ಚಾಟಕ್ಕೆ ಬೆಳಗಾವಿ ಪೋಲೀಸರು ಲಗಾಮು ಹಾಕುವದು ಅಗತ್ಯವಾಗಿದೆ.
ಗಣಪತಿ ವಿಸರ್ಜನೆಯ ವೇಳೆ ವಯಕ್ತಿಕ ಕಾರಣಕ್ಕಾಗಿ ಹುಡುಗರು ಚಾಕು ಚೂರಿ ಅಂತಾ ಚುಚ್ಚಾಟ ಮಾಡಿದ್ರು ಈದ್ ಮೀಲಾದ್ ದಿನ ರಾತ್ರಿ ಹುಡುಗರು ಇದೇ ರೀತಿ ಚಾಕು ಚಲಾಯಿಸುದ್ರು, ಇವತ್ತು,ಕ್ಷುಲ್ಲಕ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ಆಗಿದ್ದು,
ಖಾಸಗಿ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿಯಾಗಿದೆ.
ವಿದ್ಯಾರ್ಥಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.ಕಾಲೇಜು ರಸ್ತೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಬಳಿ ಗಲಾಟೆ ಆಗಿದೆ.ಒಂದು ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತೊಂದು ಕಾಲೇಜು ಬಗ್ಗೆ ಅವಹೇಳನಕಾರಿ ರೀಲ್ಸ್ ಮಾಡಿ ಹರಿಬಿಟ್ಟಿದ್ದರು.
ಇದೇ ವಿಚಾರಕ್ಕೆ ಹೊಡೆದಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು ಪರಸ್ಪರ ಹಲ್ಲೆ ಮಾಡಿದ್ದಾರೆ.
ಸ್ಥಳಕ್ಕೆ ಖಡೇಬಜಾರ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯುವಕರ ಗಲಾಟೆ ವೇಳೆ ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಾಯಾಳು ವಿದ್ಯಾರ್ಥಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.