ಬೆಳಗಾವಿ-ಸುಮಾರು 25 ಕ್ಕೂ ಹೆಚ್ಚು ಜನರ ಗ್ರೂಪ್ ಜೊತೆ ರಿಸಾರ್ಟ್ ಗೆ ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಡ ಘಟನೆ ಕಣಕುಂಬಿ ಬಳಿಯ ಜಂಗಲ್ ರಿಸಾರ್ಟ್ ನಲ್ಲಿ ನಡೆದಿದೆ.
ನಿನ್ನೆ ವಿಕೆಂಡ್ ಶನಿವಾರ ಖಾಸಗಿ ಕಂಪನಿಯ ಸರ್ವಿಸ್ ಸೆಂಟರ್ ನ ಗ್ರೂಪ್ ಒಂದು ಜಂಗಲ್ ರಿಸಾರ್ಟ್ ಗೆ ಹೋಗಿತ್ತು ಇಂದು ಮಧ್ಯಾಹ್ನ ಈಜುಕೋಳದಲ್ಲಿ ಮುಳುಗಿ ಬೆಳಗಾವಿ ಖಾಸಭಾಗ ಪ್ರದೇಶದ 25 ವರ್ಷದ ಮಹಾಂತೇಶ್ ಗುಂಜೀಕರ್ ಮೃತಪಟ್ಟ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ರಿಸಾರ್ಟಿನ ಈಜುಕೋಳದಲ್ಲಿ ಮುಳುಗಿದ ಮಹಾಂತೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ತರಲಾಯಿತು ಅಲ್ಲಿಯ ವೈದ್ಯರ ಸಲಹೆಯಂತೆ ಮಹಾಂತೇಶ್ ನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ತರುವಾಗ ಮಾರ್ಗದ ಮದ್ಯದಲ್ಲಿ ಮಹಾಂತೇಶ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಮಹಾಂತೇಶನ ಕುಟುಂಬಸ್ಥರು ಇದೊಂದು ಅನುಮಾನಾಸ್ಪದ ಸಾವು ಎಂದು ಆರೋಪಿಸಿದ್ದು ಈತನ ಜೊತೆ ರಿಸಾರ್ಟ್ ಗೆ ಹೋಗಿದ್ದ ಗ್ರೂಪ್ ಪ್ರಕಾರ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಹಾಂತೇಶ್ ಗುಂಜಿಕರನ ಸಾವಿನ ರಹಸ್ಯ ಬಯಲಾಗಲಿದೆ.