ಬ್ಯುಟಿ ಪಾರ್ಲರ್ ಮೇಲೆ ಸೈಬರ್ ರೇಡ್…..!!

ಬೆಳಗಾವಿ : ವೇಶಾವಾಟಿ ನಡೆಸುತ್ತಿದ್ದ ಸ್ಪಾ ಮತ್ತು ಬ್ಯೂಟಿ ಪಾರ್ಲರ ಸೆಂಟರ್ ಒಂದರ ಮೇಲೆ ದಾಳಿ ಮಾಡಿರುವ ಬೆಳಗಾವಿಯ ಸಿಇಎನ್ ಪೊಲೀಸರು 6 ಮಹಿಳೆಯರನ್ನು ರಕ್ಷಣೆ ಮಾಡುವ ಮೂಲಕ ಮಾಲಿಕಳನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಅನಗೂಳದ ಮುಖ್ಯ ರಸ್ತೆಯಲ್ಲಿ ಇರುವ ಅಂಜಲಿ ಸ್ಪಾ ಮತ್ತು ಬ್ಯೂಟಿ ಪಾರ್ಲ ರ್ ಮೇಲೆ ಈ ದಾಳಿಯನ್ನು ನಡೆಸಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಆಯುಕ್ತ ಹಾಗೂ ಉಪ ಆಯುಕ್ತರ ಮಾರ್ಗದರ್ಶನದಂತೆ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯ ಪಿಐ ಬಿ.ಆರ್. ಗಡ್ಡೇಕರ್ ಅವರ ನೇತ್ರತ್ವದಲ್ಲಿ ಈ ದಾಳಿ ನಡೆದಿದೆ.

ಈ ದಾಳಿ ವೇಳೆ ವೇಶಾವಾಟಿಕೆಯಲ್ಲಿ ತೊಡಗಿದ್ದ 6 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ ಈ ವೇಶಾವಾಟಿಕೆ ಚಟುವಟಿಕೆಯಲ್ಲಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹಾಗೂ ಕಾಕತಿಯ ಮಹಿಳೆ ಸೇರಿ ಅನಗೂಳದ ನಾಲ್ವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅಲ್ಲದೆ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲಿಕಿಯಾದ ಅಂಜಲಿ ಅವಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Check Also

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ …

Leave a Reply

Your email address will not be published. Required fields are marked *