ಬೆಳಗಾವಿ-ಬೆಳಗಾವಿಯಲ್ಲಿ ಮಧ್ಯರಾತ್ರಿ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ.ಮೈನಿಂಗ್ ಉದ್ಯಮಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು ಐಟಿ ಶಾಕ್ ಕೊಟ್ಟಿದೆ.ಬೆಳಗಾವಿಯ ಮೈನೀಂಗ್ ಕಿಂಗ್,ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ದಾಳಿ ನಡೆದಿದೆ.ಮೈನಿಂಗ್ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮಿಗಳಾಗಿರುವ ದೊಡ್ಡಣ್ಣವರ್ ಬ್ರದರ್ಸ್ ಮನೆ ಮತ್ತು ಕಚೇರಿಗಳ ಮೇಲೆ,ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ಭಾಗ್ಯನಗರದ ನಿವಾಸ, ಉದ್ಯಮಬಾಗದಲ್ಲಿರುವ ಕಚೇರಿ ಮೇಲೆ ದಾಳಿ ಮಾಡಲಾಗಿದೆ.ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳ ತಂಡ.
ದಾಖಲೆ ಪರಿಶೀಲನೆ ನಡೆಸಿದೆ.ಉದ್ಯಮಬಾಗ ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನ ಕರೆಯಿಸಿಕೊಂಡ ಐಟಿ ಅಧಿಕಾರಿಗಳು.ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಕಚೇರಿಗೆ ಕರೆಯಿಸಿಕೊಂಡ ಐಟಿ ಅಧಿಕಾರಿಗಳು ಪರಶೀಲನೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಒಂದು ವರ್ಷದ ಹಿಂದೆ ವಿನೋದ್ ದೊಡ್ಡಣ್ಣವರ್ ಮನೆಗೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು.2024ರ ಡಿಸೆಂಬರ್ ನಲ್ಲಿ ದೊಡ್ಡಣ್ಣವರ್ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ.ಮನೆಗೆ ಬಂದು ಊಟ ಮಾಡಿ ಕುಶಲೋಪರಿ ವಿಚಾರಿಸಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ