ಬೆಳಗಾವಿ-ಕುಂದಾನಗರಿ ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಙದ ಹುಚ್ಚಾಟ ನಡೆದಿದೆ.ಪ್ರೇಯಸಿ ಕೊಂದು ಪಾಗಲ್ ಪ್ರೇಮಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಶಹಾಪುರದ ನವಿ ಗಲ್ಲಿಯಲ್ಲಿ ನಡೆದಿದೆ.
ಪ್ರೇಯಸಿ ಚಿಕ್ಕಮ್ಮನ ಮನೆಯಲ್ಲಿ ಕೊಲೆ ಮಾಡಿದ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಐಶ್ವರ್ಯ ಮಹೇಶ್ ಲೋಹಾರ(18) ಕೊಲೆಯಾದ ಪ್ರೇಯಸಿ.ಪ್ರಶಾಂತ್ ಯಲ್ಲಪ್ಪ ಕುಂಡೇಕರ(29) ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ ಎಂದು ಗುರುತಿಸಲಾಗಿದೆ
ಸಂಜೆ 5 ಗಂಟೆಗೆ ಚಿಕ್ಕಮ್ಮಳ ಮನೆಗೆ ಜೋಡಿಯಾಗಿ ಬಂದಿದ್ದ ಲವರ್ಸ್.ಮೊದಲು ವಿಷ ಕುಡಿಸಲು ಯತ್ನಿಸಿದ್ದಾನೆಆ ಬಳಿಕ ಪ್ರೇಯಸಿಯ ಕತ್ತಿಗೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.
ಅನಂತರ ತನ್ನ ಕತ್ತಿಗೆ ತಾನೇ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸ್ಥಳಕ್ಕೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ