ಚಿಂಚಲಿ-ಚಿಂಚಲಿ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ದಲ್ಲಿಮೂರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಾರದಾ ಢಾಲೆ 38, ಅನುಶಾ ಢಾಲೆ-10, ಅಮೃತಾ ಢಾಲೆ-14 ಆದರ್ಶ ಢಾಲೆ -8 ಸಾವು ಈ ನಾಲ್ವರು ಕೃಷ್ಣಾ ನದಿಯಲ್ಲಿ ನೀರುಪಾಲಾಗಿದ್ದಾರೆ.
ಗಂಡ ಅಶೋಕ ಡಾಲೆ(45) ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡ ಅಶೋಕನ ಕಾಟ ಜಾಸ್ತಿಯಾಗಿತ್ತು,ಇದರಿಂದ ಮನನೊಂದು ಮೂರು ಮಕ್ಕಳ ಜೊತೆಗೆ ಇಂದು ಶಾರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಗಂಡ ಅಶೋಕ ಡಾಲೆ ಕುಡಚಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ