ಬೆಳಗಾವಿ- ಬಹುಶ ಲವ್ ಬ್ರೇಕಪ್, ಬೆಳಗಾವಿಯಲ್ಲಿ ಎಂಬಿಎ ಪದವೀಧರೆ ಸೂಸೈಡ್ ಮಾಡಿಕೊಂಡ ಘಟನೆ ನಡೆದಿದೆ.ಆತ್ಮಹತ್ಯೆಗೂ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಮ್ ಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವತಿ ಸ್ನೇಹಿತ ಪಿಜಿಗೆ ಬಂದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬೆಳಗಾವಿಯ ನೆಹರೂ ನಗರದ ಪಿಜಿಯಲ್ಲಿ ನೇಣುಬೀಗಿಕೊಂಡು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿಜಯಪುರ ಜಿಲ್ಲೆಯ ಐಶ್ವರ್ಯ ಗಲಗಲಿ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.
ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದ ಐಶ್ವರ್ಯ,ವಿಜಯಪುರದಲ್ಲಿಯೇ ಎಂಬಿಎ ವ್ಯಾಸಾಂಗ ಮಾಡಿದ್ದಳು.ಕಳೆದ ಮೂರು ತಿಂಗಳಿನಿಂದ ಸಾಯಿಕೃಪಾ ಪಿಜಿಯಲ್ಲಿ ವಾಸವಿದ್ದ ಐಶ್ವರ್ಯ ಬೆಳಗಾವಿಯ ಎಕಸ್ ಕಂಪನಿಯಲ್ಲಿ ಕಲಿಕಾ ತರಬೇತಿ ಪಡೆಯುತ್ತಿದ್ದಳು ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ 6.30 ರಿಂದ 7.30 ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸ್ನೇಹಿತನೊಂದಿಗೆ ಫೋನ್ ನಲ್ಲಿ ಮಾತನಾಡಿ ಕಾಲ್ ಕಟ್ ಮಾಡಿದ್ದ ಐಶ್ವರ್ಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪೋನ್ ರಿಸೀವ್ ಮಾಡದಿದ್ದಕ್ಕೆ ಪಿಜಿಗೆ ಗಾಬರಿಯಿಂದ ಬಂದಿದ್ದ ಸ್ನೇಹಿತ ಐಶ್ವರ್ಯಳನ್ನು ಭೇಟಿಯಾಗಿ ಹೋದ ಬಳಿಕ ಈ ಘಟನೆ ನಡೆದಿದೆ.
ಪಿಜಿ ರೂಮ್ ನ ಬಾಗಿಲು ಒಡೆದು ನೋಡಿದಾಗ ಐಶ್ವರ್ಯ ಸೂಸೈಡ್ ಮಾಡಿಕೊಂಡಿದ್ದಳು,ಐಶ್ವರ್ಯ ಸ್ನೇಹಿತ ಅಲ್ಲಿಂದ ವಾಪಸ್ ಹೋಗ್ತಿರೋದನ್ನ ಸ್ಥಳೀಯರು ನೋಡಿದ್ದರು.ಸಿಸಿಟಿವಿಯಲ್ಲಿ ಐಶ್ವರ್ಯ ಸ್ನೇಹಿತ ಪಿಜಿಗೆ ಬರೋ ದೃಶ್ಯ ಸಿಸಿ ಟಿವ್ಹಿಯಲ್ಲಿ ಸೆರೆಯಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಐಶ್ವರ್ಯ ಮೊಬೈಲ್ ಕಾಲ ಡಿಟೈಲ್ಸ್ ಪರಿಶೀಲನೆ ಮಾಡುತ್ತಿದ್ದಾರೆ.
ಪಿಜಿಗೆ ಬಂದು ಹೋದ ಸ್ನೇಹಿತನ ಶೋಧ ನಡೆಸುತ್ತಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ