Breaking News

ಬೆಳಗಾವಿಯಲ್ಲಿ ಕಿಲ್ಲರ್ ಕೊರೋನಾಗೆ ಒಂದೇ ದಿನ ಮೂವರ ಬಲಿ

ಬೆಳಗಾವಿ- ಕೊರೋನಾ ಮಹಾಮಾರಿ ವೈರಸ್ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ,ಇಂದು ಬುಧವಾರ ಒಂದೇ ದಿನ ಬೆಳಗಾವಿಯ ಮೂವರು ವ್ಯಕ್ತಿಗಳು ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ಸೊಂಕಿತರ ಸಂಖ್ಯೆಯ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದೆ

ಇಂದು ಬೆಳಿಗ್ಗೆ ಕೊಲ್ಹಾಪೂರ ವೃತ್ತದಲ್ಲಿರುವ ಪ್ರಸಿದ್ಧ ಹೊಟೇಲಿನ ಮಾಲೀಕ,ಕುಮಾರಸ್ವಾಮಿ ಲೇಔಟ್ ನಿವಾಸಿ 55 ವರ್ಷದ ವ್ಯೆಕ್ತಿ ಬಲಿಯಾಗಿದ್ದಾನೆ

ಬೆಳಗಾವಿ ನಗರದಲ್ಲಿರುವ ಅನಿಗೋಳದ 77 ವರ್ಷದ,ವೃದ್ದ,ಹಾಗೂ ಅಥಣಿಯ 58 ವರ್ಷದ ವ್ಯೆಕ್ತಿ ಇಂದು ಬಲಿಯಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 18 ಕ್ಕೇರಿದಂತಾಗಿದ್ದು ಈ ಮೂವರು ಮೃತರಿಗೆ ಸೊಂಕು ಇರುವದು ದೃಡವಾಗಿತ್ತು ಎಂದು ತಿಳಿದು ಬಂದಿದ್ದು ಇಂದು ಸಂಜೆ ಬಿಡುಗಡೆ ಯಾಗಲಿರುವ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಪ್ರಕಟವಾಗಲಿದೆ.

ನಿನ್ನೆ ಮಂಗಳವಾರ ಒಂದೇ ದಿನ 64 ಜನ ಸೊಂಕಿತರು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದರು.ಅದರಲ್ಲಿ 28 ಜನ ಸೊಂಕಿತರು ಬೆಳಗಾವಿ ನಗರದವರೇ ಆಗಿದ್ದರು.ಇವತ್ತು ಕೂಡಾ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ.

ಡಿಸ್ಚಾರ್ಜ್

ಇಂದು ಬುಧವಾರ ಕೊರೋನಾ ಸೊಂಕಿನಿಂದ ಗುಣಮುಖರಾಗಿ 19ಚ ಜನ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನಿಂದ ಇಂದು ಬುಧವಾರ  ಡಿಸ್ಚಾರ್ಜ್  ಆಗಿದ್ದಾರೆ

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *