Breaking News
Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಲಾಕ್ ಇಂದು 41 ಸೊಂಕಿತರ ಪತ್ತೆ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಲಾಕ್ ಇಂದು 41 ಸೊಂಕಿತರ ಪತ್ತೆ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸಂಪೂರ್ಣವಾಗಿ ಲಾಕ್ ಆಗಿ ಬಿಟ್ಟಿದೆ.ಇಂದು ಬುಧವಾರ 41 ಜನರಿಗೆ ಸೊಂಕು ತಗಲಿದೆ.

ಇಂದು ಬುಧವಾರ ಒಂದೇ ದಿನ 41 ಜನ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 602 ಕ್ಕೆ ತಲುಪಿದೆ ಇಂದು ಪತ್ತೆಯಾದ 41 ಸೊಂಕಿತರ ಪೈಕಿ  ಹಿಂಡಲಗಾ ಕೇಂದ್ರ ಕಾರಾಗೃಹದ ಕೆಲವು ಕೈದಿಗಳಿಗೆ ಕೊರೋನಾ ವೈರಸ್ ವಕ್ಕರಿಸಿದೆ ಎಂದು ತಿಳಿದು ಬಂದಿದೆ.

ಇಂದು ಒಂದೇ ದಿನ ಮೂವರು ಸೊಂಕಿತರು ಬಲಿಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 18 ಕ್ಕೆ ತಲುಪಿದ್ದು ಮಹಾಮಾರಿಗೆ ದಿನನಿತ್ಯ ಸಾವು ನೋವು ಸಾಮಾನ್ಯವಾಗಿದೆ.

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ

ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ಬೆಂಗಳೂರು ಮತ್ತು ಬೆಳಗಾವಿ ಪ್ರದೇಶದ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.ಕೈದಿಯೊಬ್ಬನನ್ನು ವಿಜಯಪೂರದ ಜೈಲಿಗೆ ಶಿಪ್ಟ್ ಮಾಡಲು ಮುಂದಾದ ಸಂಧರ್ಭದಲ್ಲಿ ಆ ಕೈದಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *