ಬೆಳಗಾವಿ-ಬೆಳಗಾವಿಯ ಐಸಿಎಂಆರ್ ಲ್ಯಾಬ್‌ಗೂ ಕೊರೋನಾ ಕಾಟ ತಗಲಿದ್ದು ,ICMR ಲ್ಯಾಬ್‌ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡ್ತಿದ್ದ ಮೂವರಿಗೆ ಸೋಂಕು ತಗಲಿದ ಪರಿಣಾಮ ಲ್ಯಾಬ್ ಬಂದ್ ಮಾಡಲಾಗಿದೆ.
ಕಳೆದ ರಾತ್ರಿ ಮೂವರು ಮಹಿಳೆಯರು ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಆಗಿದ್ದಾರೆ. ರೋಗದ ಗುಣಲಕ್ಷಣ ಇರದ ಹಿನ್ನೆಲೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ.
ಬೆಳಗಾವಿಯ ಸುಭಾಷ್ ನಗರದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಅವರನ್ನು ಶಿಪ್ಟ್ ಮಾಡಲಾಗಿದೆ.
*ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಸೇವಿಸಿದವರಿಗೆ ಈಗ ಆತಂಕ ಶುರುವಾಗಿದೆ.
ಐಸಿಎಂಆರ್ ಲ್ಯಾಬ್‌ನ 180 ಸಿಬ್ಬಂದಿ ಊಟ ಉಪಹಾರ ಸೇವಿಸಿದ್ದ ಮಾಹಿತಿ ಇದೆ. ಈವರೆಗೂ ಐಸಿಎಂಆರ್ ಲ್ಯಾಬ್‌ನ 13 ಜನರಿಗೆ ಕೊರೊನಾ ಸೋಂಕು ತಗಲಿದೆ. ಕಳೆದ ಎರಡು ದಿನಗಳಿಂದ ಬಂದ್ ಇರುವ ಐಸಿಎಂಆರ್ ಲ್ಯಾಬ್.
ದಿನಕ್ಕೆ 800 ರಿಂದ 1000 ಥ್ರೋಟ್ ಸ್ವ್ಯಾಬ್ ಪರೀಕ್ಷಾ ಸಾಮರ್ಥ್ಯ ಹೊಂದಿರುವ ಲ್ಯಾಬ್ ಈಗ ಬಂದ್ ಆಗಿದ್ದು ನಾಳೆಯಿಂದ ಲ್ಯಾಬ್ ಮತ್ತೆ ಕಾರ್ಯನಿರ್ವಹಿಸಲಿದೆ.ಎಂದು ತಿಳಿದು ಬಂದಿದೆ.