ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಈಗ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಕೇಳಿ ಬಂದಿದೆ.
ಧಾರವಾಡ ಹೈಕೋರ್ಟಿನ ಹೋರಾಟದ ರೂವಾರಿ,ಬಿ.ಡಿ ಹಿರೇಮಠ ಅವರು ಇಂದು,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸರ್ಕಾರ ಸ್ಥಳಾಂತರ ಮಾಡದಿದ್ದರೆ,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸರ್ಕಾರ ಹುಬ್ಬಳ್ಳಿ- ದಾರವಾಡದ ನೀರಾವರಿ ಕಚೇರಿಯನ್ನು ಬೆಳಗಾವಿಯ ಸುವರ್ಣವಿಧಾನ ಸೌಧಕ್ಕೆ ಶಿಪ್ಟ್ ಮಾಡುವದು ಬೇಡ ಅದರ ಬದಲಾಗಿ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಸುವರ್ಣ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದ ಬಳಿಕ ಸುವರ್ಣ ವಿಧಾನ ಸೌಧದಲ್ಲೇ ಪ್ರತ್ಯೇಕ ರಾಜ್ಯದ ಹೋರಾಟದ ಎಚ್ಚರಿಕೆ ನೀಡಿದರು.
ಪ್ರತ್ಯೇಕ ರಾಜ್ಯ ಆಗಬೇಕೆಂದು ನಾವು ಬಯಸುವದಿಲ್ಲ,ಬರುವ ಅಧಿವೇಶನದಲ್ಲಿ ರಾಜ್ಯ ಒಂದು ಎನ್ನುವ ಭಾವನೆ ಬರಬೇಕಾದ್ರೆ ಬೆಂಗಳೂರಿನ ಉನ್ನತಮಟ್ಟದ ಕಚೇರಿಗಳು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳಬೇಕು ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಮಾರನೇಯ ದಿನವೇ ಪ್ರತ್ಯೇಕ ರಾಜ್ಯದ ಹೋರಾಟ ಆರಂಭವಾಗುತ್ತದೆ,ಎಂದು ಬಿ.ಡಿ ಹಿರೇಮಠ ಎಚ್ಚರಿಕೆ ನೀಡಿದ್ರು.