Breaking News

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ: ಮದ್ಯಂತರ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಸರ್ಕಾರದ ಬಳಿ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ನಡೆದರೆ ಈ ಭಾಗದ ಹಲವು ಸಮಸ್ಯೆಗಳ ಇತ್ಯರ್ಥ ವಾಗುತ್ತವೆ ಇಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಅಲ್ಲದೇ
ರಾಜ್ಯಪಾಲರ ಭಾಷಣ ಸುವರ್ಣಸೌಧದಲ್ಲಿ ನಡೆಯಬೇಕು. ವರ್ಷದಲ್ಲಿ ಒಮ್ಮೆಯಾದರೂ ಸಚಿವ ಸಂಪುಟ ಸಭೆ ಕರೆಯಬೇಕು
ಸಚಿವರ ಸಭೆಗಳನ್ನು ಸಹ ಸುವರ್ಣಸೌಧದ ಕಟ್ಟಡದಲ್ಲಿಯೇ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಂ ಆಕಾಂಕ್ಷಿಯಾಗುವ‌ ವಿಚಾರದ ಬಗ್ಗೆ ಮಾತನಾಡಿದ ಅವರು ಮಿಷನ್ 2023ಎನ್ನುವ ಹೆಸರಿನಲ್ಲಿ ಈಗಾಗಲೇ ಪಕ್ಷ ಸಂಘಟನೆ ಆರಂಭಿಸಿದ್ದೇವೆ. ಮುಂಬರುವ ಚುನಾವಣೆ ಎದುರಿಸಲು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆವೆ ಮುಖ್ಯ ಮಂತ್ರಿ ಹುದ್ದೆಯ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಚಿಂತನೆಯಲ್ಲಿಲ್ಲ ಎಂದ ಅವರು
ಸಮಯ ಬಂದಾಗ ನೋಡೋಣ
ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು ನಾವು ಅಧಿಕಾರಕ್ಕೆ ಬಂದಾಗ ಅದರ ಬಗ್ಗೆ ಯೋಚಿಸೋಣ ಅಲ್ಲದೆ ನಮ್ಮ ಪಕ್ಷದಲ್ಲಿ ಸಿಎಂ ಸ್ಥಾನದ ರೇಸ್ ನಲ್ಲಿ ಬಹಳಷ್ಟು ಹಿರಿಯರಿದ್ದಾರೆ.
ನಂತರ ನನ್ನ ಪಾಳೇ ಸದ್ಯಕ್ಕೆ ಸಿಎಂ ಸ್ಥಾನಕ್ಕೆ ನನಗೆ ಯಾವುದೇ ತರಾತುರಿ ಇಲ್ಲ ಎಂದು ಹೇಳಿದರು.

ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದರು. ಆ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

Check Also

ಲವ್ ಮ್ಯಾರೇಜ್ ಆಗಿದೆ, ಪೋಷಕರ ಬೆದರಿಕೆ ಇದೆ. ರಕ್ಷಣೆ ಕೊಡಿ…!!

ಬೆಳಗಾವಿ ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ, ನನಗೆ ನೀನು ನಿನಗೆ ನಾನು ಎಂದು ಕೈ ಕೈ …

Leave a Reply

Your email address will not be published. Required fields are marked *