ಬೆಳಗಾವಿ-ಇಟ್ಕೊಂಡವನಿಗೆ ಬೇಕಾದಾಗ ಹಣ ಕೊಟ್ಟು, ಆತ ಬೇರೆಯವಳ ಜೊತೆ ಮದುವೆಯಾದಾಗ ಸಮಂಧಿಕರ ಜೊತೆ ಕೂಡಿಕೊಂಡ ಇಟ್ಕೊಂಡವನನ್ನು ಪುನಃ ವಶೀಕರರಣ ಮಾಡಲು ಕಲ್ಪನಾ ಇಬ್ಬರು ಮಹಿಳೆಯರ ಕೊಲೆ ಮಾಡಿಸಿದ ಕಲ್ಪನಾ ಎಂಬಾಕೆ,ಜೈಲು ಸೇರಿದ ಘಟನೆ ನಡೆದಿದೆ.
ಬೆಳಗಾವಿ- ಬೆಳಗಾವಿ ಬಳಿಯ ಮಚ್ಛೆ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಇಬ್ಬರು ವಿವಾಹಿತ ಮಹಿಳೆಯರ ಕೊಲೆ ಪ್ರಕರಣವನ್ನು ಬೆಳಗಾವಿ ಪೊಲೀಸರು ಬೇಧಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಾಳ್ಯಾನಟ್ಟಿಯ ಕಲ್ಪನಾ ಮಲ್ಲೇಶ ಬಸರಿಮರದ (35), ಚಂದಗಡ ತಾಲೂಕಿನ ಸುರತೆ ಗ್ರಾಮದ ಮಹೇಶ ಮೊನಪ್ಪ ನಾಯಿಕ (20), ಬೆಳಗುಂದಿ ಗ್ರಾಮದ ರಾಹುಲ್ ಮಾರುತಿ ಪಾಟೀಲ (19), ಗಣೇಪುರದ ರೋಹಿತ ನಾಗಪ್ಪ ವಡ್ಡರ (21) ಹಾಗೂ ಕಾಳ್ಯಾನಟ್ಟಿಯ ಶಾನೂರ ನಾಗಪ್ಪ ಬನ್ನಾರ (18) ಬಂಧಿತ ಆರೋಪಿಗಳು.
ಮಚ್ಛೆ ಗ್ರಾಮದ ಬ್ರಹ್ಮ ಲಿಂಗ ನಗರದಲ್ಲಿ ಹಾಡಹಗಲೇ ನಡೆದ ಡಬಲ್ ಮರ್ಡರ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿತ್ತು.
ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಲಾಗಿತ್ತು.
ಪ್ರಕರಣ ಹಿನ್ನೆಲೆ: ಕೊಲೆಯಾದ ಕಾಳ್ಯಾನಟ್ಟಿಯ ಗಂಗಪ್ಪ ಪ್ರಶಾಂತ ಹುಲಮಣಿ ಹಾಗೂ ಆರೋಪಿ ಅದೇ ಗ್ರಾಮದ ಕಲ್ಪನಾ ಬಸರಿಮರದ ಮಧ್ಯೆ ಅನೈತಿಕ ಸಂಬಂಧವಿತ್ತು. ಹೀಗಾಗಿ ಕಲ್ಪನಾ ಆಗಾಗ ಗಂಗಪ್ಪನಿಗೆ ಹಣ ಕೊಡುತ್ತಿದ್ದಳು. ಈಚೆಗೆ ಗಂಗಪ್ಪ ರೋಹಿಣಿಯ ಜೊತೆ ವಿವಾಹ ಆಗಿ ಕಲ್ಪನಾಳಿಂದ ದೂರಾಗಿದ್ದ. ಹೀಗಾಗಿ ಕಲ್ಪನಾ ತಾನು ಕೊಟ್ಟ ಹಣ ವಾಪಸ್ ಮರಳಿಸುವಂತೆ ದುಂಬಾಲು ಬಿದ್ದಿದ್ದಳು. ಆದರೆ, ಗಂಗಪ್ಪ ಹಣ ಕೊಡದೆ ಸತಾಯಿಸುತ್ತಿದ್ದ. ತನಗಾದ ಅನ್ಯಾಯವನ್ನು ಅಕ್ಕನ ಮಗನಾದ ಮಹೇಶನ ಬಳಿ ತೋಡಿಕೊಂಡಿದ್ದು, ಮಹೇಶನ ಜೊತೆಗೆ ಸೇರಿ ಕಲ್ಪನಾ ರೋಹಿಣಿಯ ಕೊಲೆಗೆ ಸಂಚು ರೂಪಿಸಿ, ಸೆ.26ರಂದು ಸಂಜೆ 4 ಗಂಟೆಯ ಸುಮಾರಿಗೆ ರೋಹಿಣಿ ಹಾಗೂ ರಾಜಶ್ರೀ ಬನ್ನಾರ ವಾಕಿಂಗ್ ಹೊರಟಿದ್ದ ವೇಳೆ ನಾಲ್ವರು ಆರೋಪಿಗಳು ಬೈಕ್ ಮೇಲೆ ಬಂದು ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಹಾಗೂ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಪ್ರಕರಣ ಬೇಧಿಸಲು ಮೂರು ತಂಡ ರಚಿಸಲಾಗಿತ್ತು.
ಮೂರು ದಿನದೊಳಗೆ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ.