Home / Breaking News / ಕೆರೆ ನಿರ್ಮಿಸಲು ಹಂದಿಗನೂರ ಗ್ರಾಮಕ್ಕೆ 22 ಎಕರೆ ಜಮೀನು

ಕೆರೆ ನಿರ್ಮಿಸಲು ಹಂದಿಗನೂರ ಗ್ರಾಮಕ್ಕೆ 22 ಎಕರೆ ಜಮೀನು

ಹಂದಿಗನೂರು ಗ್ರಾಮದ ಕೆರೆ ನಿರ್ಮಾಣಕ್ಕೆ 22 ಎಕರೆ ಸರ್ಕಾರಿ ಭೂಮಿ ಹಸ್ತಾಂತರ

ಯಮಕನಮರಡಿ: ಹಂದಿಗನೂರು ಗ್ರಾಮದ ಜನರ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರ, ಕೆರೆ ನಿರ್ಮಾಣದ ಬಹು ವರ್ಷಗಳ ಕನಸು ನನಸಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಹಂದಿಗನೂರು ಗ್ರಾಮ ಪಂಚಾಯಿತಿಗೆ 22 ಎಕರೆ ಭೂಮಿಯನ್ನು ಹಸ್ತಾಂತರಿಸಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಂದಿಗನೂರು ಗ್ರಾಮದ ಬಳಿ ಕೆರೆ ನಿರ್ಮಾಣಕ್ಕಾಗಿ ಸರ್ಕಾರದ ಆದೇಶದಂತೆ ಸರ್ಕಾರಿ ಗೋಮಾಳ ಭೂಮಿಯನ್ನು ಸಭೆಯಲ್ಲಿ ಹಸ್ತಾಂತರಿಸಿದರು.

ಕೆರೆ ನಿರ್ಮಾಣದಿಂದ ಸುತ್ತಲಿನ 10 ಗ್ರಾಮಗಳ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ , ಕುಡಿಯುವ ನೀರು, ಅಂತರ ಜಲಮಟ್ಟ ಹೆಚ್ಚಳ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆ ನಿರ್ಮಾಣ ಮಾಡಲಾಗುತ್ತಿದೆ.

ಹಲವು ವರ್ಷಗಳಿಂದ ಕೆರೆ ನಿರ್ಮಾಣ ಮಾಡಬೇಕು ಎಂಬುವುದು ಗ್ರಾಮಸ್ಥರ ಕನಸಾಗಿತ್ತು. ಆದ್ದರಿಂದ ಶಾಸಕ ಸತೀಶ್ ಜಾರಕಿಹೊಳಿ ಅವರು ವಿಶೇಷ ಮುತ್ವರ್ಜಿ ವಹಿಸಿ, ಆ ಕನಸನ್ನು ಪೂರ್ಣಗೊಳಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಕಡೋಲಿ ಜಿಲ್ಲಾ ಪಂಚಾಯಿತಿ ಸಮಸ್ತ ನಾಗರೀಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

 

ಶಾಸಕ ಸತೀಶ್ ಜಾರಕಿಹೊಳಿ ಕೆರೆ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಅವರ ಸತತ ಪ್ರಯತ್ನದಿಂದ 22 ಎಕರೆ ಭೂಮಿ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಅವರ ಯೋಜನೆಗೆ ಸಕಾಲಿಕವಾಗಿ ಸ್ಪಂಧಿಸಿ ಸರ್ಕಾರದಿಂದ ಮಂಜೂರಾತಿ ಪಡೆಯುವಲ್ಲಿ ಸಹಕರಿಸಿದರು. ಈ ಯೋಜನೆ ಜನರು ಸದುಪಯೋಗ ಪಡೆಸಿಕೊಂಡು, ಶಾಸಕ ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಕೆಪಿಸಿಸಿ ಸದಸ್ಯ ಮಲ್ಲಗೌಡ ಪಾಟೀಲ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಗ್ರಾಪಂ ಮಾಜಿ ಅಧ್ಯಕ್ಷ ನಿಂಗಪ್ಪ ನಾಯಿಕ, ತಾಪಂ ಸದಸ್ಯ ಮಾರುತಿ ಸನದಿ, ಕಲ್ಲಪ್ಪಾ ಪಾಟೀಲ, ನಾಗೇಶ ನಾಯಿಕ, ಜ್ಯೋತಿಭಾ ಮನೋಳಕರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಇದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *