ಬೆಳಗಾವಿ- ಮೈಸೂರಿನಲ್ಲಿ ಪಳಗಿ ಬಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ
ಹೆಚ್ ಅವರು ಸದ್ದಿಲ್ಲದೇ ಬೆಳಗಾವಿಯ ಐತಿಹಾಸಿಕ ಚನ್ನಮ್ಮ ವೃತ್ತಕ್ಕೆ ವೀರರಾಣಿ ಚನ್ನಮ್ಮಾಜಿಯ ಇತಿಹಾಸದ ಗತವೈಭವ ಸೂಚಿಸು ಲುಕ್ ನೀಡುತ್ತಿದ್ದಾರೆ.
ಮೈಸೂರು ಮಾದರಿಯಲ್ಲೇ ಚನ್ನಮ್ಮಾಜಿಯ ಹೋರಾಟದ ಚಿತ್ರಣ,ಕಿತ್ತೂರು ಕೋಟೆಯ ಗತವೈಭವ ಮರಕಳಿಸುವ ಅಲಂಕಾರವನ್ನು ಚನ್ನಮ್ಮನ ಮೂರ್ತಿಯ ನಾಲ್ಕು ದಿಕ್ಕುಗಳಲ್ಲಿ ಬೇರೆ,ಬೇರೆ ಚಿತ್ರಗಳನ್ನು ಅಳವಡಿಸಿ,ಈ ವೃತ್ತಕ್ಕೆ ಹೊಸ ಮೆರಗು ನೀಡುತ್ತಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಈ ವರ್ಷ ಚನ್ನಮ್ಮನ ವೃತ್ತಕ್ಕೆ ಹೊಸ ಲುಕ್ ನೀಡುವ ಮಹತ್ವದ,ಎಲ್ಲರೂ ಮೆಚ್ಚುವಂತಹ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿರುವದು ಕನ್ನಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ