ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿನ ಶತಮಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ನಿರ್ದೇಶಕಿಯಾಗಲು ಸ್ಪರ್ದೆ ಮಾಡಿ,ವಿಜಯದ ಹೊಸ್ತಿಲಕ್ಕೆ ತಲುಪಿ ವೀರೋಚಿತ ಸೋಲು ಅನುಭವಿಸಿದ್ದಾರೆ.
ಖಾನಾಪೂರ ಕ್ಷೇತ್ರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಪವರ್ ಫುಲ್ ಟಕ್ಕರ್ ಕೊಟ್ಟಿದ್ದರಿಂದಲೇ,ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತಕೇಂದ್ರದ ಎದುರು ಮತದಾನದ ಅವಧಿ ಮುಗಿಯುವವರೆಗೂ ಖುರ್ಚಿ ಹಾಕಿಕೊಂಡು ಕುಳಿತುಕೊಳ್ಳುವಂತೆ ಮಾಡಿತ್ತು.
ಇಂದು ಬೆಳಿಗ್ಗೆಯಿಂದಲೇ ಡಿಸಿಎಂ ಲಕ್ಷ್ಮಣ ಸವದಿ,ಸಂಸದ ಅಣ್ಣಾಸಾಹೇಬ್ ಜೊಲ್ಲೆ,ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ,ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಅವರು ಬಿ.ಕೆ ಮಾಡೆಲ್ ಹೈಸ್ಕೂಲ್ ಎದುರಿನ ಐನಾಕ್ಸ್ ಚಿತ್ರ ಮಂದಿರದ ಆವರಣದಲ್ಲೇ ಠಿಖಾನಿ ಹೂಡಿದ್ದು ವಿಶೇಷವಾಗಿತ್ತು.
ಇನ್ನೂಂದು ಕಡೆ ಸರ್ಕ್ಯುಟ್ ಹೌಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ ,ಅವರು ಎಲ್ಲ ಬೆಳವಣಿಗೆಗಳ ಮೇಲೆ ನಿಗಾವಹಿಸಿದ್ದರು.
ಮದ್ಯಾಹ್ನ ಮೂರು ಗಂಟೆಯವರೆಗೆ 48 ಜನ ಮತ ಚಲಾಯಿಸಿದ್ದರು,ಕೊನೆಯ ಕ್ಷಣದಲ್ಲಿ ಕೋರ್ಟ್ ಆದೇಶ ಪಡೆದುಕೊಂಡು ಮತ ಚಲಾಯಿಸಿದ ಬಳಿಕ ,ವಿಜಯದ ಮಾಲೆ ಅರವಿಂದ್ ಪಾಟೀಲ್ ಅವರ ಕೊರಳಿಗೆ ಬಿದ್ದಿತು, ಈ ನಾಲ್ಕು ಜನ ಮತ ಚಲಾಯಿಸುವ ಮುನ್ನ ಅಂಜಲಿ ನಿಂಬಾಳ್ಕರ್ ಅವರೇ ಗೆಲ್ತಾರೆ ಎಂದು ಎಲ್ಲರೂ ಹೆಳ್ತಾ ಇದ್ರು,ಕೊನೆಯ ಕ್ಷಣದಲ್ಲಿ ನಾಲ್ಕು ಜನ ಮತದಾನ ಮಾಡಿದ ಬಳಿಕ ಗೆಲುವಿನ ಚಿತ್ತ ಬದಲಾಗಿದ್ದು ನಿಜ
ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಜಿಲ್ಲೆಯ ಬಲಾಡ್ಯ ಸಾಹುಕಾರ್ ಗಳಿಗೆ ಟಕ್ಕರ್ ಕೊಟ್ಟಿದ್ದು ನಿಜ,ಯಾಕಂದ್ರೆ ಏಕಾಂಗಿ ಹೋರಾಟ ಮಾಡಿ ಅಲ್ಪಾವಧಿಯಲ್ಲೇ 25 ಮತಗಳನ್ನು ಪಡೆಯುವದು ಸುಲಭದ ಮಾತಲ್ಲ,ಕೇವಲ ಎರಡೇ ಮತಗಳ ಅಂತರಿಂದ ಪರಾಭವಗೊಂಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಸೋತು ಗೆದ್ದಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ,ರಮೇಶ್ ಕತ್ತಿ,ಬಾಲಚಂದ್ರ ಜಾರಕಿಹೊಳಿ,ಎಲ್ಲರೂ ಒಂದಾಗಿ,ಒಗ್ಗಟ್ಟಿನ ಪ್ರಯತ್ನ ಮಾಡಿದ ಪರಿಣಾಮವೇ ಅಂಜಲಿ ನಿಂಬಾಳ್ಕರ್ ಸೋಲೊಪ್ಪಬೇಕಾಯಿತು
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ನಾಮಪತ್ರ ವಾಪಸ್ ಪಡೆಯವ ಕೊನೆಯ ದಿನ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎಂಟ್ರಿ ಕೊಟ್ಟು, ಅರವಿಂದ್ ಪಾಟೀಲ್ ನಮ್ಮ ಕ್ಯಾಂಡಿಡೇಟ್ ಎಂದು ಘೊಷಣೆ ಮಾಡಿದ ಬಳಿಕ.ಖಾನಾಪೂರ ಕ್ಷೇತ್ರದ ವಿಶ್ಲೇಷಣೆಗಳೆಲ್ಲ ತಲೆಕೆಳಗಾದವು
ಏನೇ ಆಗಲಿ ಸಾಹುಕಾರ್ ಗಳ ಅಡ್ಡಾದಲ್ಲಿ ಸಾಹುಕಾರ್ತಿ ಅಂಜಲಿ ನಿಂಬಾಳ್ಕರ್ ಗುಡುಗಿದ್ದು,ಅವರಿಗೆ ಟಕ್ಕರ್ ಕೊಟ್ಟಿದ್ದು ವಿಶೇಷವಾಗಿತ್ತು.